ರಾಜ್ಯ

ಪಾಪಿಗಳ ಘೋರ ಕೃತ್ಯಕ್ಕೆ ಭಕ್ತರಷ್ಟೇ ಅಲ್ಲ, 60 ಕಾಗೆಗಳ ಸಾವು!

ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯ ಮಾರಮ್ಮ ದೇವಾಲಯದ ವಿಷಾಹಾರ ಸೇವನೆ ಪ್ರಕರಣದಲ್ಲಿ ಕೇವಲ ಭಕ್ತರಷ್ಟೇ ಅಲ್ಲ ಅಲ್ಲಿನ ಸುಮಾರು 60 ಕಾಗೆಗಳೂ ಸಹ ಸಾವನ್ನಪ್ಪಿವೆ.

ಪಾಪಿಗಳ ಘೋರ ಕೃತ್ಯಕ್ಕೆ ಭಕ್ತರಷ್ಟೇ ಅಲ್ಲ, 60 ಕಾಗೆಗಳ ಸಾವು!
ವಿಷ ಪ್ರಸಾದ ದುರಂತ
Published On :
ಚಾಮರಾಜನಗರ: ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯ ಮಾರಮ್ಮ ದೇವಾಲಯದ ವಿಷಾಹಾರ ಸೇವನೆ ಪ್ರಕರಣದಲ್ಲಿ ಕೇವಲ ಭಕ್ತರಷ್ಟೇ ಅಲ್ಲ ಅಲ್ಲಿನ ಸುಮಾರು 60 ಕಾಗೆಗಳೂ ಸಹ ಸಾವನ್ನಪ್ಪಿವೆ.
ದೇಗುಲದ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಭಕ್ತರಿಗೆ ಮಾಡಲಾಗಿದ್ದ ಪ್ರಸಾದದ ಉಳಿಕೆ ಶೇಷ ಪದಾರ್ಥವನ್ನು ಕಸದ ಬುಟ್ಟಿಗೆ ಎಸೆಯಲಾಗಿತ್ತು. ಈ ವೇಳೆ ಕಸದಲ್ಲಿದ್ದ ಉಳಿಕೆ ಆಹಾರವನ್ನು ತಿಂದಿದ್ದ ಅಲ್ಲಿನ ಸುಮಾರು 60 ಕಾಗೆಗಳೂ ಕೂಡ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. 
ದೇಗುಲಕ್ಕೆ ಆಗಮಿಸಿದ್ದ ಭಕ್ತರಿಗೆ ಟೊಮ್ಯಾಟೋ ಬಾತ್ ಮಾಡಿಸಲಾಗಿತ್ತು. ಈ ವೇಳೆ ಆಹಾರ ಸೇವಿಸಿದ 18 ಮಂದಿ ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಅಸ್ವಸ್ಥಗೊಂಡಿದ್ದವರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೇವಸ್ಥಾನದ ಬಡಿಸಲಾದ ಆಹಾರದಲ್ಲಿ ಕೀಟನಾಶಕ ಬೆರೆಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಕೆಲವರು ಪ್ರಸಾದವನ್ನು ಅಲ್ಲಿಯೇ ಸೇವಿಸಿದರೆ, ಕೆಲವರು ಮನೆಗೆ ಕೊಂಡೊಯ್ದಿದ್ದರು. ಆದರೆ ಪ್ರಸಾದ ಸೇವಿಸಿದ ಕೆಲ ಹೊತ್ತಿನಲ್ಲೇ ಒಬ್ಬರಾದ ನಂತರ ಒಬ್ಬರು ಎಂಬಂತೆ ಈ ವರೆಗೂ 18 ಜನ ಮೃತರಾದರೆ ನೂರಕ್ಕೂ ಹೆಚ್ಚು ಜನ ಜೀವನ್ಮರಣ ಹೋರಾಟದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಗೆ ಇಡೀ ದೇಶ ಕಂಬನಿ ಮಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.