ಕೆಟ್ಟ ಸ್ಥಿತಿಯಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಶಾಸಕರು ಹಣ ನೀಡಲಿ: ಮುಜರಾಯಿ ಸಚಿವ
: ಕೆಟ್ಟ ಸ್ಥಿತಿಯಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಯಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಶಾಸಕರು ತಮ್ಮ ಅನುದಾನದಲ್ಲಿ ...

Published On :
ಬೆಂಗಳೂರು: ಕೆಟ್ಟ ಸ್ಥಿತಿಯಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಯಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಶಾಸಕರು ತಮ್ಮ ಅನುದಾನದಲ್ಲಿ ಹಣ ನೀಡಬೇಕೆಂದು ಶಾಸಕರಿಗೆ ಮುಜರಾಯಿ ಸಚಿವ ರಾಜಶೇಖರ್ ಬಸವರಾಜ್ ಪಾಟೀಲ್ ಪತ್ರ ಬರೆದಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 34 ಸಾವಿರ ದೇವಾಲಯಗಳು ಬರುತ್ತವೆ, ಅದರಲ್ಲಿ ಸುಮಾರು 175 ದೇವಾಲಯಗಳ ವಾರ್ಷಿಕ ಆದಾಯ 25 ಲಕ್ಷಕ್ಕೂ ಅಧಿಕವಾಗಿದೆ, ಇವುಗಳನ್ನು ಎ ವರ್ಗಕ್ಕೆ ಸೇರಿಸಲಾಗಿದೆ,
ಇನ್ನೂ 158 ದೇವಾಲಯಗಳು ಬಿ ಗುಂಪಿಗೆ ಸೇರಿದ್ದು, ಇವುಗಳ ವಾರ್ಷಿಕ ಆದಾಯ 5ರಿಂದ 25 ಲಕ್ಷ ರು ಒಳಗಿದೆ, ಉಳಿದ ಸಿ ಗುಂಪಿನ ದೇವಾಲಯಗಳು ಉತ್ತಮ ಪರಿಸ್ಥಿತಿಯಲ್ಲಿಲ್ಲ, ಈ ದೇವಾಲಯಗಳಿಗೆ ಸರಿಯಾದ ರಸ್ತೆ, ನೀರು ಹಾಗೂ ಶೌಚಾಲಯಗಳಿಲ್ಲ, ಹೀಗಾಗಿ ಈ ದೇವಾಲಯಗಳಿಗೆ ಬರಲು ಪ್ರವಾಸಿಗರು ಬಯಸುವುದಿಲ್ಲ.
ದೇವಾಸ್ಥಾನಗಳ ಅಭಿವೃದ್ಧಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸುಮಾರು 56 ಕೋಟಿ ಮೀಸಲಿಡಲಾಗಿದೆ ಎಂದು ಸಚಿವ ಪಾಟೀಲ್ ಹೇಳಿದ್ದಾರೆ, ರಾಜ್ಯದ 224 ಶಾಸಕರು ತಲಾ 20 ಲಕ್ಷ ನೀಡಿದರೇ ದೇವಾಲಯಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


