ಮಿತವ್ಯಯ ಆಡಳಿತ ಮಂತ್ರ ಪಠಿಸುವ ಸಿಎಂ: ಸಹೋದರ ರೇವಣ್ಣರಿಂದ ದುಂದು ವೆಚ್ಚ
ಮುಖ್ಯಮಂತ್ರಿ ಕುಮಾರ ಸ್ವಾಮಿ ಮಿತವ್ಯಯದ ಆಡಳಿತ ನಡೆಸಬೇಕು ಎಂದು ನಿರ್ಧರಿಸಿದ್ದರೇ, ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಸಿಎಂ ಸಹೋದರ ...

Published On :
ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಮಿತವ್ಯಯದ ಆಡಳಿತ ನಡೆಸಬೇಕು ಎಂದು ನಿರ್ಧರಿಸಿದ್ದರೇ, ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಸಿಎಂ ಸಹೋದರ ಹೊಸ ವಾಹನಗಳ ಖರೀದಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ನವೆಂಬರ್ 28 ರಂದು ನಡೆದ ಸಭೆಯಲ್ಲಿ 300 ಹೊಸ ವಾಹನ ಖರೀದಿಸಲು ರೇವಣ್ಣ ನಿರ್ಧರಿಸಿದ್ದಾರೆ, 7 ವರ್ಷ ಹಳೇಯದಾಗಿರುವ ಹಾಗೂ 2 ಲಕ್ಷ ಕಿಮೀ ದೂರ ಕ್ರಮಿಸಿರುವ ವಾಹನಗಳನ್ನು ಬದಲಾಯಿಸಲು ರೇವಣ್ಣ ಚಿಂತಿಸಿದ್ದಾರೆ.
ಈ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕಾಪಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದೆ. ಲೋಕೋಪಯೋಗಿ ಇಲಾಖೆಯ ಎಲ್ಲಾ ವಿಭಾಗಗಳು ಹಾಗೂ ಉಪ ವಿಭಾಗಗಳ ಅಧಿಕಾರಿಗಳಿಗೆ ವಾಹನಗಳ ಪಟ್ಟಿ ನೀಡುವಂತೆ ಸೂಚಿಸಲಾಗಿದೆ,
ಸಭೆ ನಡೆದ ದಿನ ಇಲಾಖೆಯ ಮೂರು ವಿಭಾಗಗಳು ತಮಗೆ ಬೇಕಾಗಿರುವ ವಾಹನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಉಳಿದ ಇಲಾಖೆಗಳು ಡಿಸೆಂಬರ್ 7 ರೊಳಗೆ ವರದಿ ಸಲ್ಲಿಸಲಿವೆ.,
ಬೆಂಗಳೂರು ದಕ್ಷಿಣ ವಿಭಾಗ 125 ವಾಹನಗಳಿಗೆ ಪ್ರಸ್ತಾವನೆಯಿಟ್ಟಿದೆ, ಕೇಂದ್ರ ಸರ್ಕಾರದ ಅನುದಾನದಿಂದ 25 ಕೋಟಿ ರು ಹಣ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕುಮಾರ ಸ್ವಾಮಿಎಚ್.ಡಿ ರೇವಣ್ಣH.d RevannaKumara swamy. Public Works Department300 new vehicls300 ಹೊಸ ವಾಹನ ಖರೀೂದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


