ಬೆಳಗಾವಿ: ನಾಪತ್ತೆಯಾಗಿದ್ದ ಶ್ರೀಗಂಧ ಕಳ್ಳ 30 ವರ್ಷಗಳ ನಂತರ ಅರೆಸ್ಟ್!
ಶ್ರೀಗಂಧ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 34 ವರ್ಷದ ನಂತರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಲಾಗಿದೆ.

Published On :
ಬೆಳಗಾವಿ: ಶ್ರೀಗಂಧ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 34 ವರ್ಷದ ನಂತರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಲಾಗಿದೆ.
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ(61) ಬಂಧಿತ ಆರೋಪಿ. 1984ರಲ್ಲಿ ಬೈಲಹೊಂಗಲ ಕೋರ್ಟ್ ಈತನನ್ನು ಬಂಧಿಸುವಂತೆ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಆದರೆ ಅಂದಿನಿಂದಲೂ ನಾಪತ್ತೆಯಾಗಿದ್ದ ಚಂದ್ರಕಾಂತ್ 34 ವರ್ಷದ ಬಳಿಕ ನಿನ್ನೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿಯ ಕಿತ್ತೂರು ಪಟ್ಟಣದ ಬಳಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಯನ್ನು ಸಾಗಾಣೆ ಮಾಡುತ್ತಿದ್ದಾಗ ಪೊಲೀಸರು ವಾಹನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದ.
ಮಹಾರಾಷ್ಟ್ರದ ಸಾಂಗ್ಲಿಯಾ ಮಿಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1984 ರಲ್ಲಿ 54 ಸಾವಿರ ರು. ಮೌಲ್ಯದ ಸುಮಾರು 900 ಕೆಜಿ ಶ್ರೀಗಂಧವನ್ನು ಕದ್ದು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದು ಪರಾರಿಯಾಗಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ArrestSandalwoodಬಂಧನಶ್ರೀಗಂಧChandrakant Laxman Suryavanshismuggling caseಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿಸ್ಮಗ್ಲಿಂಗ್ ಕೇಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


