ಕೊಡಗು: 43 ಟನ್ ಅಕ್ಕಿ ಸೇರಿದಂತೆ ಕೊಳೆಯುತ್ತಿದೆ 8 ಲಕ್ಷ ರು. ಪರಿಹಾರ ಸಾಮಾಗ್ರಿ
ಕೊಡಗು ಪ್ರವಾಹ ಕಳೆದು ಹೆಚ್ಚು ಕಮ್ಮಿ 3 ತಿಂಗಳಾದರೂ ಮಡಿಕೇರಿಗೆ ಕಳುಹಿಸಿದ್ದ ಪರಿಹಾರ ಸಾಮಾಗ್ರಿ ಸಂಪೂರ್ಣ ಉಪಯೋಗವಾಗದೇ ಕೊಳೆಯುತ್ತಿವೆ.

Published On :
ಮಡಿಕೇರಿ: ಕೊಡಗು ಪ್ರವಾಹ ಕಳೆದು ಹೆಚ್ಚು ಕಮ್ಮಿ 3 ತಿಂಗಳಾದರೂ ಮಡಿಕೇರಿಗೆ ಕಳುಹಿಸಿದ್ದ ಪರಿಹಾರ ಸಾಮಾಗ್ರಿ ಸಂಪೂರ್ಣ ಉಪಯೋಗವಾಗದೇ ಕೊಳೆಯುತ್ತಿವೆ.
ಸುಮಾರು 43 ಟನ್ ಅಕ್ಕಿ ಸೇರಿದಂತೆ 8 ಲಕ್ಷ ರು. ಪರಿಹಾರ ಸಾಮಾಗ್ರಿ ಮಡಿಕೇರಿಯ ಜ್ಯೂನಿಯರ್ ಕಾಲೇಜ್ ಕ್ಯಾಂಪಸ್ ನಲ್ಲಿ ಕೊಳೆಯುತ್ತಿವೆ. ಹೊಸದಾಗಿ ನಿರ್ಮಾಣವಾಗಿರುವ ಕಾಲೇಜಿನ ಕ್ಲಾಸ್ ರೂಮ್ ಗಳಲ್ಲಿ ಬಾತ್ ರೂಂ ಮತ್ತು ಶೌಚಾಲಯ ಸಾಮಾಗ್ರಿಗಳಾದ, ಸೋಪು, ಟೂತ್ ಬ್ರಶ್, ಪ್ಲಾಸ್ಟಿಕ್ ಬಕೆಟ್, ಮಗ್ಸ್ ಸೇರಿದಂತೆ ಹೊಸ ಬಟ್ಟೆಗಳು, ಸ್ಟೇಷನರಿ ಸಾಮಾಗ್ರಿಗಳಾದ ಬುಕ್ ಮತ್ತು ಪೆನ್ ಇವೆ,
ಹೀಗಾಗಿ ಇಲ್ಲಿರುವ ವಸ್ತುಗಳನ್ನು ತೆರವುಗೊಳಿಸುವಂತೆ ಕಾಲೇಜು ಆಡಳಿತ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಳೇಯ ಕ್ಲಾಸ್ ರೂಂ ಗಳಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಸುಮಾರು 500 ಮಂದಿ ಸಂತ್ರಸ್ತರಿದ್ದಾರೆ,ಅವರಿಗಾಗಿ ಸಾಮಾಗ್ರಿಗಳನ್ನು ಬಳಸಲಾಗುತ್ತಿದೆ, ಅವುಗಳು ಹಾಳಾಗದಂತೆ, ಸಂತ್ರಸ್ತರಿಗೆ ತಲುಪಿಸುವಲ್ಲಿ ನಿಗಾ ವಹಿಸುತ್ತೇವೆ, ಒಬ್ಬ ಸಂತ್ರಸ್ತರಿಗೆ ಪುನರ್ವಸತಿ ಸಿಕ್ಕ ಮೇಲೆ ಉಳಿದ ಸಾಮಾಗ್ರಿಗಳನ್ನು ಬೇರೆ ಸಂತ್ರಸ್ತರಿಗೆ ನೀಡುತ್ತೇವೆ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಇನ್ನೂ 7 ಪರಿಹಾರ ಕೇಂದ್ರಗಳು ಕೆಲಸ ಮಾಡುತ್ತಿವೆ, ಕಾಲೇಜಿನಿಂದ ಪರಿಹಾರ ಸಾಮಾಗ್ರಿಗಳನ್ನು ತಂದು ಎಲ್ಲವನ್ನು ವಿತರಿಸಲಾಗುತ್ತದೆ ಎಂದು ಹೆಚ್ಚುವರಿ ಉಪ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


