ರಾಜ್ಯ

ಗಣೇಶ ಉತ್ಸವದ ವೇಳೆ ದುರಂತ: ತಲೆ ಮೇಲೆ ಸಿಡಿದ ಪಟಾಕಿ, ಯುವತಿ ಸಾವು

ಗಣೇಶ ಉತ್ಸವದ ವೇಳೆ ನಡೆದ ಪಟಾಕಿ ದುರಂತದಲ್ಲಿ 21 ವರ್ಷ ಯುವತಿಯೊಬ್ಬಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾನುವಾರ ನಡೆದಿದೆ...

ಗಣೇಶ ಉತ್ಸವದ ವೇಳೆ ದುರಂತ: ತಲೆ ಮೇಲೆ ಸಿಡಿದ ಪಟಾಕಿ, ಯುವತಿ ಸಾವು
ಸಂಗ್ರಹ ಚಿತ್ರ
Published On :
ತಿಪಟೂರು: ಗಣೇಶ ಉತ್ಸವದ ವೇಳೆ ನಡೆದ ಪಟಾಕಿ ದುರಂತದಲ್ಲಿ 21 ವರ್ಷ ಯುವತಿಯೊಬ್ಬಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾನುವಾರ ನಡೆದಿದೆ. 
ಸಿತಾರ (21) ಮೃತಪಟ್ಟ ಯುವತಿಯೆಂದು ಹೇಳಲಾಗುತ್ತಿದೆ. ಗಣೇಶ ಉತ್ಸವದ ವೇಳೆ ಭಾರೀ ಪ್ರಮಾಣದ ಸಿಡಿಮದ್ದುಗಳನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯೊಂದಿ ಸಿತಾರ ಅವರ ತಲೆ ಮೇಲೆ ಬಿದ್ದು ಸಿಡಿದಿದೆ. 
ಇದರಿಂದ ಸಿತಾರಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ಸಿತಾರಾ ಅವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 
ಘಟನೆ ಸಂಬಂಧ ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.