ಕಲಬುರಗಿ: ಕಾಣೆಯಾಗಿದ್ದ ದಂಪತಿ ಜಮೀನಿನಲ್ಲಿ ಶವವಾಗಿ ಪತ್ತೆ!
ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಿಂದ ನವೆಂಬರ್ 2 ರಿಂದ ಕಾಣಿಯಾಗಿದ್ದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಜಮೀನಿನಲ್ಲಿ ದಂಪತಿಯನ್ನು ಬೆಂಕಿ ಹಚ್ಚಿ ಸುಡಲಾಗಿದೆ.

ಕಲಬುರಗಿ: ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಿಂದ ನವೆಂಬರ್ 2 ರಿಂದ ಕಾಣಿಯಾಗಿದ್ದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಜಮೀನಿನಲ್ಲಿ ದಂಪತಿಯನ್ನು ಬೆಂಕಿ ಹಚ್ಚಿ ಸುಡಲಾಗಿದೆ.
ಅಜಯ್ ಕಾಳೆ (30) ಜ್ಯೋತಿ (20) ಹತ್ಯೆಗೀಡಾದ ದಂಪತಿಗಳು. ಎರಡು ವರ್ಷಗಳ ಹಿಂದಷ್ಟೇ ಇವರ ವಿವಾಹವಾಗಿತ್ತು.
ಈ ದಂಪತಿ ನಾಪತ್ತೆಯಾದ ನಂತರ ಅಜಯ್ ತಾಯಿ, ಜ್ಯೋತಿ ಸಹೋದರರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು.
ಆದಾಗ್ಯೂ, ಸೂಳೇ ಪೇಟೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಪೋಷಕರು ಅಪಹರಣ ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಸೂಳೇ ಪೇಟೆ ಠಾಣೆಯ ಸಿಬ್ಬಂದಿ ವಿರುದ್ಧವೇ ಪ್ರಕರಣ ದಾಖಲಿಸಿದ್ದರು.
ಅಪರಿಚ ಮಹಿಳೆಯ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಜಮೀನಿನಲ್ಲಿ ದಂಪತಿಯ ಅಸ್ಥಿಪಂಜರ ಕಂಡುಬಂದಿದೆ. ನಂತರ ಇದು ಅಜಯ್ ಹಾಗೂ ಜ್ಯೋತಿ ಅವರ ಮೃತದೇಹ ಎಂಬುದು ಸ್ಪಷ್ಟವಾಗಿದೆ.
ಅಜಯ್ ನಿಡಗುಂದಾದಕ್ಕೆ ಬರುವ ಮುಂಚೆ ಮಹಾರಾಷ್ಟ್ರದಲ್ಲಿ ಸಣ್ಣದಾದ ಅಂಗಡಿ ಇಟ್ಟುಕೊಂಡಿದ್ದ. ಅಲ್ಲಿ ದರೋಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅಜಯ್ ನಿಡಗುಂದಾಕ್ಕೆ ಬಂದ ನಂತರವೂ ಕಳ್ಳತನ, ದರೋಡೆ ಕೃತ್ಯಗಳನ್ನು ಮುಂದುವರೆಸಿದ್ದ ಎಂಬುದಾಗಿ ಎಸ್ಪಿ ಶಶಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


