ಮೈಸೂರು : ಚೂಡಿದಾರ್ ವಿಚಾರದಲ್ಲಿ ಜಗಳ : ಅಕ್ಕ- ತಂಗಿ ಆತ್ಮಹತ್ಯೆ
ಚೂಡಿದಾರ್ ಧರಿಸುವ ವಿಚಾರದಲ್ಲಿ ಜಗಳ ನಡೆದು ಅಕ್ಕ- ತಂಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ. ನರಸೀಪುರ ತಾಲೂಕಿನ ಕಾಲಬಸವನಹುಂಡಿ ಗ್ರಾಮದಲ್ಲಿ ನಡೆದಿದೆ.

ಮೈಸೂರು:ಚೂಡಿದಾರ್ ಧರಿಸುವ ವಿಚಾರದಲ್ಲಿ ಜಗಳ ನಡೆದು ಅಕ್ಕ- ತಂಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ. ನರಸೀಪುರ ತಾಲೂಕಿನ ಕಾಲಬಸವನಹುಂಡಿ ಗ್ರಾಮದಲ್ಲಿ ನಡೆದಿದೆ.
10 ನೇ ತರಗತಿ ವಿದ್ಯಾರ್ಥಿನಿ ಅನು (16 ) ಹಾಗೂ ಆಕೆಯ ಚಿಕ್ಕಪ್ಪನ ಮಗಳು ಕವಿತಾ (30) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಚೂಡಿದಾರ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ನಿನ್ನೆ ನಡುವೆ ಜಗಳ ನಡೆದಿದೆ. ನಂತರ ಹತಾಶೆಗೊಂಡ ಅನು ಮನೆಯ ಹಿಂಬಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮನೆಯ ಕೊಠಡಿಯಲ್ಲಿ ಕವಿತಾ ತನ್ನ ವೇಲ್ ನಿಂದಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನು ಆತ್ಮಹತ್ಯೆಯಿಂದ ಕಂಗಲಾದ ಪೋಷಕರು ರೋಧಿಸುತ್ತಿರುವುದನ್ನು ನೋಡಿದ ಕವಿತಾ ಅಲ್ಲಿಂದ ಮನೆಯೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಲಕಾಡು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


