ಪತ್ರಕರ್ತೆ ಗೌರಿ ಲಂಕೇಶ್, ದಾಭೋಲ್ಕರ್ ಹತ್ಯೆಗೆ ನಂಟು: ಸಿಬಿಐ ಅಧಿಕಾರಿಗಳು
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ಪುಣೆಯ ಎಡಪಂಥೀಯ ಚಿಂತಕ ನರೇಂದ್ರ ದಾಬೋಲ್ಕರ್ ಅವರ ಹತ್ಯೆಗೆ ಪರಸ್ಪರ ಸಂಬಂಧವಿರುವುದು ಇದೀಗ ದೃಢವಾಗಿದೆ...

Published On :
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ಪುಣೆಯ ಎಡಪಂಥೀಯ ಚಿಂತಕ ನರೇಂದ್ರ ದಾಬೋಲ್ಕರ್ ಅವರ ಹತ್ಯೆಗೆ ಪರಸ್ಪರ ಸಂಬಂಧವಿರುವುದು ಇದೀಗ ದೃಢವಾಗಿದೆ.
ಗೌರಿ ಹತ್ಯೆ ಆರೋಪಿಯೊಬ್ಬ ದಾಭೋಲ್ಕರ್ ಹತ್ಯೆ ಆರೋಪಿಗೆ ಪಿಸ್ತೂಲು ಹಾಗೂ ಗುಂಡುಗಳನ್ನು ಹಸ್ತಾಂತರಿಸಿದ್ದ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಚಿಂತಕರ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವೊಂದು ದೊರಕಿದಂತಾಗಿದೆ.
ಇತ್ತೀಚೆಗೆ ದಾಭೋಲ್ಕರ್ ಹಂತಕ ಎಂದು ಹೇಳಲಾಗುತ್ತಿರುವ ಸಂಚಿನ ಅಂದೂರೆ ಎಂಬಾತನನ್ನು ಔರಂಗಾಬಾದ್'ನಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಈತನ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸುವ ವೇಳೆ ಸಿಬಿಐ, ಪುಣೆಯ ಶಿವಾಜಿನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಈ ಮಾಹಿತಿಯನ್ನು ನೀಡಿದೆ ಎಂದು ತಿಳಿದುಬಂದಿದೆ.
ಗೌರಿ ಲಂಕೇಶ್ ಹಾಗೂ ದಾಭೋಲ್ಕರ್ ಹತ್ಯೆ ನಡುವೆ ಪರಸ್ಪರ ಸಂಬಂಧವಿದೆ. ಹೀಗಾಗಿ ಅಂದೂರೆಯ ಇನ್ನಷ್ಟು ವಿಚಾರಣೆಯ ಅಗತ್ಯವಿದ್ದು, ಆತನ ಕಸ್ಟಡಿಯನ್ನು ವಿಸ್ತರಿಸಬೇಕೆಂದು ಸಿಬಿಐ ಮನವಿ ಸಲ್ಲಿಸಿತ್ತು. ಇದಕ್ಕೆ ಒಪ್ಪಿದೆ ನೀಡಿರುವ ಮ್ಯಾಜಿಸ್ಟ್ರೇಟರು, ಆ.30ವರೆರೆಗೂ ಕಸ್ಟಡಿ ವಿಸ್ತರಿಸಿದ್ದಾರೆ.
ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿದ್ದ ಸಚಿನ ಅಂದೂರೆಯನ್ನು ವಿಚಾರಣೆಗೊಳಪಡಿಸಿದಾಗ ಆತ ಹವು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾದವನೊಬ್ಬ ತನಗೆ 7.65 ಎಂಎಂ ದೇಶೀ ನಿರ್ಮಿತ ಪಿಸ್ತೂಲನ್ನು ಹಾಗೂ 3 ಬುಲೆಟ್ ಗಳನ್ನು ತನಗೆ ಹಸ್ತಾಂತರಿಸಿದ್ದ. ಬಳಿಕ ತಾನು ಈ ಪಿಸ್ತೂಲು ಹಾಗೂ ಗುಂಡುಗಳನ್ನು ತನ್ನ ಭಾವ ಸುಭಂ ಸುರಳೆಗೆ 2018ರ ಆಗಸ್ಟ್ 11 ರಂದು ಔರಂಗಾಬಾದ್'ನಲ್ಲಿ ಹಸ್ತಾಂತರಿಸಿದೆ ಎಂದು ಆತ ಹೇಳಿದ್ದಾನೆಂದು ಸಿಬಿಐ ನ್ಯಾಯಾಲಯಕ್ಕೆ ಲಿಖಿತ ಮಾಹಿತಿ ನೀಡಿದೆ.
ಬಳಿಕ ಸುರಳೆ, ಪಿಸ್ತೂಲು ಹಾಗೂ ಗುಂಡುಗಳನ್ನು ಔರಂಗಾಬಾದ್'ನವನೇ ಆದ ತನ್ನ ಸ್ನೇಹಿತ ರೋಹಿತ್ ರೇ ಎಂಬುವವನಿಗೆ ಹಸ್ತಾಂತರಿಸಿದೆ ಎಂದು ಅಂದೂರೆ ಹೇಳಿದ್ದಾನೆಂದು ಸಿಬಿಐ ತಿಳಿಸಿದೆ ಎಂದು ಅದು ಹೇಳಿದೆ.
ಅಂದೂರೆ ನೀಡಿದ ಮಾಹಿತಿ ಆಧರಿಸಿ ರೋಹಿತ್ ರೇಗೆಯ ಮನೆಯ ಮೇಲೆ ದಾಳಿ ನಡೆಸಲಾಯಿತು. ಆಗ ಒಂದು ಕಪ್ಪು ಬಣ್ಣದ ದೇಶೀ ನಿರ್ಮಿತ ಪಿಸ್ತೂಲು ಮ್ಯಾಗಜೀನ್, ಮತ್ತು ಮೂರು 7.65 ಸಜೀವ ಕ್ಯಾರ್ಟ್ರಿಡ್ಜ್ ಗಳು ಸಿಕ್ಕವು. ಇವು ಯಾರ ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ವಿವರಿಸಿದೆ.
ಇದೇ ವೇಳೆ ಗೌರಿ, ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಜ್ಯ ಎಸ್ಐಟಿ ಬಂಧಿತನಾಗಿ ನ್ಯಾಯಾಂಗ ವಶದಲ್ಲಿರುವ ಆರೋಪಿಯೊಬ್ಬನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ಸಿಬಿಐ ನಿರತವಾಗಿದೆ. ಏಕೆಂದರೆ ಗೌರಿ ಹಾಗೂ ದಾಭೋಲ್ಕರ್ ಪ್ರಕರಣಗಳು ಪರಸ್ಪರ ನಂಟು ಹೊಂದಿವೆ ಎಂದು ಸಿಬಿಐ ಹೇಳಿದೆ. ಅಲ್ಲದೆ, ದಾಭೋಲ್ಕರ್ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ. ಎನ್ನಲಾದ ಶರದ್ ಕಲಾಸ್ಕರ್'ನನ್ನು ತನ್ನ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ನಡೆಸಿರುವುದಾಗಿ ಅದು ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


