ಬೆಂಗಳೂರು: ಕ್ಷುಲ್ಲಕ ಜಗಳಕ್ಕೆ ಕ್ಯಾಬ್ ಡ್ರೈವರ್ ಕೊಲೆ, ಮೂವರ ಬಂಧನ
ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದ ನಾಲವ್ರು ದುಷ್ಕರ್ಮಿಗಳ ತಂಡ ಕ್ಯಾಬ್ ಚಾಲಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಬನಶಂಕರಿಯ ಕದಿರೇನಹಳ್ಳಿ ಬಾರ್ ಒಂದರಲ್ಲಿ....

Published On :
ಬೆಂಗಳೂರು: ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದ ನಾಲವ್ರು ದುಷ್ಕರ್ಮಿಗಳ ತಂಡ ಕ್ಯಾಬ್ ಚಾಲಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಬನಶಂಕರಿಯ ಕದಿರೇನಹಳ್ಳಿ ಬಾರ್ ಒಂದರಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಕುಮಾರಸ್ವಾಮಿ ಲೇಔಟ್ ಪೋಲೀಸರು ಇದಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತರನ್ನು ಬನಶಂಕರಿಯ ನಿವಾಸಿ ಸಾರಾಬಂಡೆ ಚಂಡೂರ್ ಎಂದು ಗುರುತಿಸಲಾಗಿದೆ. ಕದಿರೇನಹಳ್ಳಿ ನಿವಾಸಿಗಳಾದ ನಯಾಜ್ (32), ನದೀಮ್ (36) ಮತ್ತು ರಿಯಾಜ್ (30) ಬಂಧಿತರು.
ಬಾರ್ ನಲ್ಲಿ ಬಿಲ್ ಕೊಡಲು ಕ್ಯಾಶ್ ಕೌಂಟರ್ ಬಳಿ ಚಂಡೂರ್ ನಿಂತಿದ್ದ ವೇಳೆ ನಯಾಜ್ ಸೇರಿ ನಾಲ್ವರ ಗ್ಯಾಂಗ್ ಆಗಮಿಸಿದೆ. ತಮಗೆ ಬಾರ್ ಒಳಗೆ ಹೋಗಲು ದಾರಿ ಬಿಡುವಂತೆ ಚಂಡೂರ್ ಗೆ ಕೇಳಿದಾಗ ಅವರು ಸ್ವಲ್ಪ ಕಾಲ ಕಾಯಲು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಗ್ಯಾಂಗ್ ಆತನೊಂದಿಗೆ ಜಗಳವಾಡಿದೆ. ನಯಾಜ್ ಹಾಗೂ ರಿಯಾಜ್ ಅವರಿಗೆ ಚಾಕ್ಲುವಿನಿಮ್ದ್ ಅಹಲ್ಲೆ ನಡೆಸಿದೆ.
ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಬಾರ್ ನ ಕ್ಯಾಶಿಯರ್ ಕುಮಾರಸ್ವಾಮಿ ಲೇಔಟ್ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಇದಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು ಒಬ್ಬ ಆರೋಪಿ ಹುಡುಕಾಟ ನಡೆದಿದೆ.ತನಿಖೆ ಪ್ರಗತಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
cab driverಕ್ಯಾಬ್ ಡ್ರೈವರ್Kumaraswamy Layout policeಕುಮಾರಸ್ವಾಮಿ ಲೇಔಟ್ ಪೋಲೀಸ್Kadirenehalli barಕದಿರೇನಹಳ್ಳಿ ಬಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


