ಬೆಳಗಾವಿ: ದುಬಾರಿ ಬೆಲೆಯಿಂದ ಬಕ್ರೀದ್ ಗೆ ಬಲಿಯಾಗದೇ ಪ್ರಾಣ ಉಳಿಸಿಕೊಂಡ ಲಕ್ಕಿ!
ಬಕ್ರೀದ್ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಾಪುರ ಜಿಲ್ಲೆಗಳಲ್ಲಿ ಸಾವಿರಾರು ಮೇಕೆ ಮತ್ತು ಕುರಿಗಳು ತಮ್ಮ ಪ್ರಾಣ ತ್ಯಾಗ ಮಾಡಿದವು, ಆದರೆ ಇಂಡಿ ಮೇಕೆಯೊಂದು ಬಕ್ರೀದ್ ಗೆ ...

Published On :
ಬೆಳಗಾವಿ: ಬಕ್ರೀದ್ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಾಪುರ ಜಿಲ್ಲೆಗಳಲ್ಲಿ ಸಾವಿರಾರು ಮೇಕೆ ಮತ್ತು ಕುರಿಗಳು ತಮ್ಮ ಪ್ರಾಣ ತ್ಯಾಗ ಮಾಡಿದವು, ಆದರೆ ಇಂಡಿ ಮೇಕೆಯೊಂದು ಬಕ್ರೀದ್ ಗೆ ಬಲಿಯಾಗದೇ ಪ್ರಾಣ ಉಳಿಸಿಕೊಂಡಿದೆ. ವಿಜಯಾಪುರದ ರಾವ್ ಸಾಹೇಬ್ ದೇವ್ ಜಿ ಈ ಲಕ್ಕಿ ಮೇಕೆಗೆ 2.5 ಲಕ್ಷ ರು ಹಣ ನಿಗದಿ ಮಾಡಿದ್ದರಿಂದ ಕೊಂಡುಕೊಳ್ಳುವವರಿಲ್ಲದೇ ಮತ್ತಷ್ಟು ದಿನ ಬದುಕುವ ಅವಕಾಶ ಸಿಕ್ಕಿದೆ.
ತಲೆಯ ಮೇಲೆ ಅರ್ಧ ಚಂದ್ರಾಕಾರದ ಗುರುತಿದ್ದರೆ ಅದು ಒಳ್ಳೆಯ ಲಕ್ಷಣ ಎಂದು ಮುಸ್ಲಿಮರು ನಂಬಿದ್ದಾರೆ,. ಈ ಮೇಲೆಕೆ ತಲೆ ಮಾತ್ರವಲ್ಲದೇ ಮೈಯ ಮೇಲೂ ಅರ್ಧ ಚಂದ್ರಾಕಾರದ ಗುರುತುಗಳಿವೆ,
ಮೇಕೆ ಅಥವಾ ಕುರಿ 15 ರಿಂದ 20 ಸಾವಿರ ರೂಪಾಯಿಯೊಳಗೆ ಮಾರಾಟವಾಗುತ್ತವೆ,.ಆದರೆ ಅರ್ಧಾ ಚಂದ್ರಾಕಾರ ಇದ್ದ ಈ ಮೇಕೆಯ ಬೆಲೆ ನೋಡಿ ಖರೀದಿದಾರರು ಶಾಕ್ ಆಗಿದ್ದರು. ಜೊತೆಗೆ ಅರ್ಧ ಚಂದ್ರಾಕಾರ ಇರುವುದರಿಂದ ಹಲವು ಮಂದಿ ಇದರೆಡೆಗೆ ಆಕರ್ಷಿತರಾಗಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಹಣ ಕೊಟ್ಟು ಖರೀದಿಸಲು ಯಾರೋಬ್ಬರು ಮುಂದಾಗಲಿಲ್ಲ. ಕೆಲ ಗ್ರಾಹಕರು ಅದನ್ನು 1.25 ಲಕ್ಷಕ್ಕೆ ಮಾರುವಂತೆ ಅದರ ಮಾಲೀಕನಿಗೆ ಹೇಳಿದರು. ಲಕ್ಕಿ ಮೇಕೆಯನ್ನು 1.25 ಲಕ್ಷಕ್ಕೆ ಮಾರುವುದಕ್ಕಿಂತ ಅದನ್ನು ತನ್ನ ಬಳಿಯೇ ಉಟ್ಟುಕೊಳ್ಳುವುದಾಗಿ ಮಾಲೀಕ ದೇವಾಜಿ ತಿಳಿಸಿದ್ದಾರೆ.
ಮೇಕೆ ತನಗೆ ಅದೃಷ್ಟ ತರುತ್ತದೆ ಎಂದು ಅದರ ಮಾಲೀಕನ ಬಯಕೆಯಾಗಿತ್ತು, ಆದರೆ ಅವನ ದುರಾದೃಷ್ಟ ಅದಕ್ಕೆ ಜೀವದಾನ ಕರುಣಿಸಿತ್ತು,. ತನ್ನ ಮೇಕೆ ತಾನು ನಿಗದಿ ಪಡಿಸಿರುವ ಬೆಲೆ ಮಾರಾಟವಾಗಲಿದೆ ಎಂದು ದೇವಾಜಿ ನಂಬಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


