ಕೃಷಿ ಸಾಲ ಮನ್ನಾ: ನಾಲ್ಕರ ಬದಲು ಒಂದೇ ಕಂತಿನಲ್ಲಿ ಹಣ ಪಾವತಿಗೆ ಕೆಲ ಬ್ಯಾಂಕ್ ಗಳ ಒತ್ತಾಯ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾರೀ ಮಹತಾಕಾಂಕ್ಷೆಯ ರೈತರ ಸಾಲ ಮನ್ನಾ ಯೋಜನೆ ಜಾರಿಗೆ ಕೆಲ ಬ್ಯಾಂಕುಗಳು ಅಡ್ಡಿಪಡಿಸುವ ಲಕ್ಷಣಗಳಿದೆ.

Published On :
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾರೀ ಮಹತಾಕಾಂಕ್ಷೆಯ ರೈತರ ಸಾಲ ಮನ್ನಾ ಯೋಜನೆ ಜಾರಿಗೆ ಕೆಲ ಬ್ಯಾಂಕುಗಳು ಅಡ್ಡಿಪಡಿಸುವ ಲಕ್ಷಣಗಳಿದೆ. ರೂ .49,000 ಕೋಟಿ ಕೃಷಿ ಸಾಲ ಮನ್ನಾ ಯೋಜನೆಯಡಿಯಲ್ಲಿ ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳು ಕಂತುಗಳಲ್ಲಿ ಹಣ ಪಡೆಯಲು ಒಪ್ಪುತ್ತಿಲ್ಲ ಎನ್ನಲಾಗಿದೆ.
ನಾಲ್ಕು ಕಂತುಗಳಲ್ಲಿ ಬ್ಯಾಂಕ್ ಗಳಿಗೆ ಹಣ ಪಾವತಿಸುವ ಸರ್ಕಾರದ ಯೋಜನೆಯ ಬದಲು ಒಂದೇ ಕಂತಿನಲ್ಲಿ ಅಷ್ಟೂ ಹಣ ಪಾವತಿಸಲು ನಾವು ಯೋಜಿಸಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆದರೆ ಇದಕ್ಕಾಗಿ ಮುಂದಿನ ವರ್ಷ ಬಜೆಟ್ ವರೆಗೆ ಬ್ಯಾಂಕ್ ಗಳು ಕಾಯಬೇಕಿದೆ ಎಂದು ಅವರು ಹೇಳುತ್ತಾರೆ.ಈ ಒಂದೇ ಕಂತಿನ ಸಾಲ ಮರುಪಾವತಿಯು ಸುಮಾರು 23,000-24,000 ಕೋಟಿ ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ.
ಸಹಕಾರಿ, ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ ಪ್ರತಿನಿಧಿಗಳೊಂದಿಗೆ ನಡೆಸಿದ ಅನೇಕ ಸುತ್ತಿನ ಮಾತುಕತೆ ಬಳಿಕ ಸರ್ಕಾರವು ಮುಂದಿನ ನಾಲ್ಕು ವರ್ಷಗಳಲ್ಲಿ ನಾಲ್ಕು ಕಂತುಗಳಲ್ಲಿ ಕೃಷಿ ಸಾಲ ಮರುಪಾವತಿ ಮಾಡಲಿದೆ ಎಂದು ಘೋಷಿಸಿತ್ತು. ಇದಕ್ಕೆ ಸಹಕಾರಿ ಬ್ಯಾಂಕು ಗಳು ಸಮ್ಮತಿ ಸೂಚಿಸಿದ್ದವು. ಆದರೆ ಕೆಲವು ಬ್ಯಾಂಕುಗಳು ಈಗ ಸರ್ಕಾರದ ಯೋಜನೆ ಕುರಿತು ಅಸಮಾಧಾನಗೊಂಡಿದೆ ಎಂದು ಎಕ್ಸ್ ಪ್ರೆಸ್ ಗೆ ನಂಬಿಗಸ್ಥ ಮೂಲಗಳಿಂದ ಮಾಹಿತಿ ಬಂದಿದೆ.
"ಪ್ರಾರಂಭದಲ್ಲಿ ಲ್ಲಾ ಬ್ಯಾಂಕುಗಳು ನಾಲ್ಕು ಕಂತುಗಳಲ್ಲಿ ಪಾವತಿಯನ್ನು ಸ್ವೀಕರಿಸಲು ಸಿದ್ಧರಿದ್ದವು ... ಆದರೆ ಈಗ ಕೆಲ ಬ್ಯಾಂಕ್ ಗಲಿಗೆ ಇದು ಇಷ್ಟವಿಲ್ಲ.ಆದರೆ ಇದರಿಂದ ನಾನು ಭಯಪಡಲಾರೆ. ಮುಂದಿನ ಬಜೆಟ್ ನಲ್ಲಿ ನಾವು ಒಂದು ಕಂತಿನಲ್ಲಿ ಸಾಲವನ್ನು ತೀರಿಸಲು 23,000-24,000 ಕೋಟಿ ರೂ. ಮೀಸಲಿಡಲಿದ್ದೇವೆ.ಎಂದು ಸಿಎಂ ಹೇಳಿದ್ದಾರೆ.ಸಾಲ ಮನ್ನಾಗಾಗಿ ಆದಾಯ ಸಂಗ್ರಹಣೆ ಯೋಜನೆಗಳನ್ನು ಸಿದ್ಧಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಸಹಕಾರಿ ಬ್ಯಾಂಕುಗಳಿಂದ ತೆಗೆದುಕೊಳ್ಳಲಾದ ಕೃಷಿ ಸಾಲಗಳ ಮನ್ನಾಗೆ ರಾಜ್ಯ ಸಚಿವ ಸಂಪುಟ ಈಗಾಗಲೇ ಆದೇಶಿಸಿದೆ.ರಾಷ್ಟ್ರೀಕೃತ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳ ಮನ್ನಾ ಬಗ್ಗೆ ಆದೇಶ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಹೊರಬೀಳಬೇಕಿದೆ. "ನಾವು ಸಾಲಪತ್ರಗಳ ವಿವರಗಳನ್ನು ನೀಡಲು ಬ್ಯಾಂಕುಗಳನ್ನು ಕೇಳಿದ್ದೇವೆ ಮತ್ತು ಅವುಗಳನ್ನು ಸಂಕಲಿಸಲು ಡಿಸೆಂಬರ್ ತನಕ ಸಮಯಾವಕಾಶ ಪಡೆಯಲಿದ್ದೇವೆ. ಮನ್ನಾ ಪ್ರಕ್ರಿಯೆಯು ತಕ್ಷಣ ಪ್ರಾರಂಭವಾಗುತ್ತದೆ. ಈ ಕಾರ್ಯಕ್ಕಾಗಿ ಹಣವನ್ನು ಹೇಗೆ ಸಂಗ್ರಹಿಸಲಾಗುವುದು ಎಂದು ನಾನು ಸಂಬಂಧಿಸಿದವರಿಗೆ ವಿವರಿಸಲಿದ್ದೇನೆ. ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿಗಳ ಸ್ವಂತ ಅರಿವಿನಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸುಮಾರು 34,000 ಕೋಟಿ ರೂ. ಕೃಷಿ ಸಾಲವಿದೆ.ಈ ವರ್ಷ ಬಜೆಟ್ ನಲ್ಲಿ 6,500 ಕೋಟಿ ರೂ. ಅನ್ನು ರಾಷ್ಟ್ರೀಕೃತ ಬ್ಯಾಂಕ್ ಸಾಲ ಮರುಪಾವತಿಗಾಗಿ ಬಳಕೆ ಮಾಡಲಾಗುತ್ತದೆ. "ಎಲ್ಲವೂ ಕಷ್ಟ, ಆದರೆ ಅದನ್ನು ಪರಿಹರಿಸಲು ಅವಕಾಶವಿದೆ" ಎಂದು ಅವರು ಹೇಳಿದರು. ಏತನ್ಮಧ್ಯೆ, ಮುಂದಿನ ಬಜೆಟ್ ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಮನ್ನಾ ಮಾಡಲು ನಿಬಂಧನೆ ರೂಪಿಸುವ ಕಾರ್ಯವನ್ನು ಅರ್ಥಶಾಸ್ತ್ರಜ್ಞರು ಮಾಡಲಿದ್ದಾರೆ.ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


