ರಾಜ್ಯ

ಕೊಡಗು: ತಗ್ಗಿದ ಮಳೆ; ರಕ್ಷಣೆ, ಪರಿಹಾರ ಕಾರ್ಯ ಬಿರುಸು

ಭಾರೀ ಮಳೆ, ಪ್ರವಾಹದಿಂದ ನಲುಗಿದ ಕೊಡಗು ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ರಕ್ಷಣಾ ಪರಿಹಾರ ಕಾರ್ಯಾಚರಣೆ ಬಿರುಸುಗೊಂಡಿದೆ.

ಕೊಡಗು: ತಗ್ಗಿದ ಮಳೆ; ರಕ್ಷಣೆ, ಪರಿಹಾರ ಕಾರ್ಯ ಬಿರುಸು
ಮಳೆ ತಗ್ಗಿದ ಚಿತ್ರ
Published On :

ಮಡಿಕೇರಿ: ಭಾರೀ ಮಳೆ, ಪ್ರವಾಹದಿಂದ ನಲುಗಿದ  ಕೊಡಗು ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ರಕ್ಷಣಾ  ಪರಿಹಾರ ಕಾರ್ಯಾಚರಣೆ ಬಿರುಸುಗೊಂಡಿದೆ. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ರಕ್ಷಣಾ  ತಂಡಗಳು ಸಂತ್ರಸ್ತ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಜಿಲ್ಲೆಯ ಹಲವೆಡೆ ಗುಡ್ಡ ಕುಸಿತದಿಂದ ಅವಶೇಷಗಳಿಂದ ಮುಚ್ಚಿಹೋಗಿದ್ದ ರಸ್ತೆಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ದ್ವೀಪಪ್ರದೇಶದಂತಾಗಿ ನಾಪತ್ತೆಯಾಗಿದ್ದ ನೂರಾರು  ಜನರನ್ನು  ಎನ್ ಡಿಆರ್ ಎಫ್, ಕ್ಷಿಪ್ರಕಾರ್ಯ ಪಡೆ ಹಾಗೂ ಯೋಧರು ರಕ್ಷಿಸಿದ್ದಾರೆ.

ಆದಾಗ್ಯೂ, ಪ್ರತಿಕೂಲ ಹವಾಮಾನದಲ್ಲಿಯೂ ಮಡಿಕೇರಿಗೆ ಆಗಮಿಸಿದ ಹೆಲಿಕಾಪ್ಟರ್ ಗಳ ಸಹಾಯದಿಂದ ಸಂತ್ರಸ್ತರನ್ನು ರಕ್ಷಿಸಲಾಯಿತು.  ಕೆಲವು ಕಡೆಗಳಲ್ಲಿ ಕಿಲೋ ಮೀಟರ್ ದೂರದಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. ಜೋಡುಪಾಳ್ಯದಲ್ಲಿ ಗರ್ಭೀಣಿ  ಸೇರಿದಂತೆ ಹಲವು ಜನರು ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ನಿನ್ನೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ಇಂದು ಪತ್ತೆಯಾಗಿದೆ.

ಮಳೆ ಭಾದಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ. ವಿ. ಸದಾನಂದಗೌಡ, ಗುಡ್ಡ ಕುಸಿತ ಹಾಗೂ ಪ್ರವಾಹದಿಂದಾಗಿ ಸುಮಾರು 40 ಜನರು ನೀರಿನಲ್ಲಿ ಕೊಚ್ಚಿಹೋಗಿದ್ದು, ಇಂತಹ ವಿಪತ್ತನ್ನು ನನ್ನ ಜೀವಮಾನದಲ್ಲಿಯೇ ಕಂಡಿರಲಿಲ್ಲ . ಯೋಧರು ಶ್ರಮವಹಿಸಿ ಸಂಕಷ್ಟದಲ್ಲಿ ಸಿಲುಕಿದ 500 ಜನರನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

 ಕೇಂದ್ರಸರ್ಕಾರ ಅಗತ್ಯ ಸಹಕಾರ ನೀಡುತ್ತಿದ್ದು, ಹಾನಿ ಕುರಿತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಅವರಿಗೆ ವರದಿ ಸಲ್ಲಿಸುವುದಾಗಿ  ತಿಳಿಸಿದರು.

ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ,  ಜಿಲ್ಲಾಡಳಿತದಿಂದ ಅಗತ್ಯ ಹಣ ಬಿಡುಗಡೆಯಾಗಿಲ್ಲ. ಇದರ ಬಗ್ಗೆ ಕೇಳಿದರೆ  ಲಿಖಿತ ಹೇಳಿಕೆಯಲ್ಲಿ ನೀಡುವಂತೆ ಕೇಳಲಾಗಿದೆ ಎಂದು ಆರೋಪಿಸಿದ ಅವರು ಕ್ಷಿಪ್ರ ಕಾರ್ಯ ಕೈಗೊಳ್ಳದ ಜಿಲ್ಲಾಡಳಿತದ ಬಗ್ಗೆ ಕೇಂದ್ರಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.