ರಾಜ್ಯ

ಕೊಡಗು : 3 ದಿನಗಳಿಂದ ರಕ್ಷಣೆಗೆ ಕಾಯುತ್ತಿರುವ ಸಂತ್ರಸ್ತರು; ಗುಡ್ಡ ಕುಸಿತದಿಂದ ಹಾದಿ ದುರ್ಗಮ

ಭೀಕರ ಜಲ ಪ್ರವಾಹಕ್ಕೆ ತುತ್ತಾಗಿ, ನೀರಿನಲ್ಲಿ ಸಿಲುಕಿರುವ ಜನತೆಯ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಆದರೆ ಸೋಮವಾರಪೇಟೆಯಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಸಿಲುಕಿರುವ

ಕೊಡಗು : 3 ದಿನಗಳಿಂದ  ರಕ್ಷಣೆಗೆ ಕಾಯುತ್ತಿರುವ ಸಂತ್ರಸ್ತರು; ಗುಡ್ಡ ಕುಸಿತದಿಂದ ಹಾದಿ ದುರ್ಗಮ
ಕೊಡಗಿನಲ್ಲಿ ಭೂಕುಸಿತ ತೆರವು, ರಕ್ಷಣಾ ಕಾರ್ಯಾಚರಣೆ (ಸಂಗ್ರಹ ಚಿತ್ರ)
Published On :
ಕೊಡಗು: ಭೀಕರ ಜಲ ಪ್ರವಾಹಕ್ಕೆ ತುತ್ತಾಗಿ, ನೀರಿನಲ್ಲಿ ಸಿಲುಕಿರುವ ಜನತೆಯ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.  ಆದರೆ ಸೋಮವಾರಪೇಟೆಯಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಸಿಲುಕಿರುವ ಇನ್ನೂ ನೂರಾರು ಜನರು ರಕ್ಷಣೆಗಾಗಿ ಕಾಯುತ್ತಿದ್ದಾರೆ. 
ಕೊಡಗಿನಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ ಆದರೂ ಮುಕ್ಕೋಡ್ಲು ಗ್ರಾಮದ ಬಳಿ ಗುಡ್ಡ ಕುಸಿತದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. 
3 ದಿನಗಳಿಂದ ಅಪಾಯ ಎದುರಿಸುತ್ತಿರುವ ಸ್ಥಳೀಯರು ಜೀವ ಕೈಲಿ ಹಿಡಿದು ರಕ್ಷಣಾ ಕಾರ್ಯಾಚರಣೆಗಾಗಿ ಎದುರು ನೋಡುತ್ತಿದ್ದಾರೆ. ಇತ್ತ ಸೇನಾ ಸಿಬ್ಬಂದಿಗಳೂ ಸಹ ಮುಕ್ಕೋಡ್ಲು ಗ್ರಾಮದಲ್ಲಿರುವವರನ್ನು ತಲುಪಲು ಹರಸಾಹಸ ಮಾಡುತ್ತಿದ್ದು ದುರ್ಗಮ ಹಾದಿಯಲ್ಲಿ 15 ಕಿ.ಮೀ ಸಂಚರಿಸಿದ್ದರು. ಆದರೆ ಗುಡ್ಡ ಕುಸಿತದಿಂದ ಸಂಕಷ್ಟ ಎದುರಾದ ಕಾರಣ ಇನ್ನೂ ಹಲವಾರು ಸಂತ್ರಸ್ತರಲ್ಲು ತಲುಪಲು ವಿಳಂಬವಾಗಿದೆ. ಇತ್ತೀಚಿನ ವರದಿಯ ಪ್ರಕಾರ ಕಾರ್ಯಾಚರಣೆಗೆ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೇನಾ ಸಿಬ್ಬಂದಿಗಳು ಮತ್ತೆ ಮಡಿಕೇರಿ ನಗರಕ್ಕೆ ಹಿಂತಿರುಗಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.