ರಾಜ್ಯ

ಕೊಡಗಿನಲ್ಲಿ ಪ್ರವಾಹ: ನಟಿ ದಿಶಾ ಪೂವಯ್ಯ ಕುಟುಂಬ ರಕ್ಷಣೆಗೆ ಸಿಎಂ ಸೂಚನೆ

ಕಳೆದ ಮೂರು-ನಾಲ್ಕು ದಿನದಿಂಡ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ತತ್ತರಿಸಿದ್ದು ಮಡಿಕೇರಿಯ ಮಾಕೊಡ್ಲುವಿನಲ್ಲಿ ನೆಲೆಸಿರುವ ನಟಿ ದಿಶಾ ಪೂವಯ್ಯ ಕುಟುಂಬ ರಕ್ಷಣೆಗಾಗಿ ಕಾಯುತ್ತಿದೆ.

ಕೊಡಗಿನಲ್ಲಿ ಪ್ರವಾಹ: ನಟಿ ದಿಶಾ ಪೂವಯ್ಯ ಕುಟುಂಬ ರಕ್ಷಣೆಗೆ ಸಿಎಂ ಸೂಚನೆ
ದಿಶಾ ಪೂವಯ್ಯ
Published On :
ಬೆಂಗಳೂರು: ಕಳೆದ ಮೂರು-ನಾಲ್ಕು ದಿನದಿಂಡ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ತತ್ತರಿಸಿದ್ದು ಮಡಿಕೇರಿಯ ಮಾಕೊಡ್ಲುವಿನಲ್ಲಿ ನೆಲೆಸಿರುವ ನಟಿ ದಿಶಾ ಪೂವಯ್ಯ ಕುಟುಂಬ ರಕ್ಷಣೆಗಾಗಿ ಕಾಯುತ್ತಿದೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾದ ನಟಿ ದಿಶಾ ತಮ್ಮ ಕುಟುಂಬ ಸದಸ್ಯರ ರಕ್ಷಣೆಗಾಗಿ ಅವರಲ್ಲಿ ಮನವಿ ಮಾಡಿದ್ದಾರೆ.
ಮಳೆಯಿಂದಾಗಿ  ನನ್ನ ಕುಟುಂಬ ಏಳೆಂಟು ಸದಸ್ಯರು ಮನೆಯಲ್ಲೇ ಸಿಲುಕಿದ್ದಾರೆ. ಸಂಪರ್ಕ ಸಾಧ್ಯವಾಗುತ್ತಿಲ್ಲ ಓರ್ವ ಗರ್ಭಿಣಿ ಮಹಿಳೆ ಸಹ ಅಲ್ಲಿದ್ದು ಅವರು ಏನಾಗಿದ್ದಾರೆ ತಿಳಿದಿಲ್ಲ, ಅವರ ಹೆರಿಗೆ ದಿನ ಕೂಡ ನಿಗದಿಯಾಗಿದ್ದು ಅವರನ್ನು ತುರ್ತಾಗಿ ಕುಶಾಲನಗರ, ಪಿರಿಯಾಪಟ್ಟಣಕ್ಕೆ ಕರೆದೊಯ್ಯಬೇಕು.  ಕನಿಷ್ಠ ಅವರನ್ನಾದರೂ ಕಾಪಾಡಿ, ಜೀವರಕ್ಷಿಸಿ ಎಂದು ಮನವಿ ಮಾಡಿದರು. 
ತಮ್ಮ ಕುಟುಂಬ ಸೇರಿ ಆ ಪ್ರದೇಶದಲ್ಲಿ ಸುಮಾರು ನಲವತ್ತು ಜನ ಸಂಕಷ್ಟದಲ್ಲಿದ್ದಾರೆ ಎಂದು ನಟಿ ಮಾದ್ಯಮಗಳಿಗೆ ವಿವರಿಸಿದರು.
ನಟಿ ದಿಶಾ ಅವರ ಮನವಿ ಆಲಿಸಿದ ಕುಮಾರಸ್ವಾಮಿ ತಕ್ಷಣಾವರ ಕುಟುಂಬದ ನೆರವಿಗೆ ಧಾವಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.