ರಾಜ್ಯ

ಕೊಡಗು ಪ್ರವಾಹ; ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿಯ ಹರಸಾಹಸ

ಕೊಡಗಿನಲ್ಲಿ ಧಾರಾಕಾರ ಮಳೆಗೆ ಭೂ ಕುಸಿತವುಂಟಾಗಿ ಮನೆ ಕಳೆದುಕೊಂಡ ವೃದ್ಧೆಯೊಬ್ಬರಿಗೆ ನ್ಯೂ ...

ಕೊಡಗು ಪ್ರವಾಹ; ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿಯ ಹರಸಾಹಸ
ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆ ಸಾಧ್ಯತೆಯಿದೆ ಎನ್ನುತ್ತಿದೆ ಹವಾಮಾನ ಇಲಾಖೆ
Published On :

ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ್ತಿಯೊಬ್ಬರು ನಡೆಸಿದ ಹರಸಾಹಸದ ಬಗ್ಗೆ  ಅನುಭವ ಹಂಚಿಕೊಂಡಿದ್ದಾರೆ.

ಕೊಡಗಿನ ಮಕ್ಕಂದೂರಿನಲ್ಲಿ ಮಳೆ ಪೀಡಿತ ಪ್ರದೇಶಗಳ ಹಾನಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ನಂತರ ಜಿಲ್ಲಾ ವರದಿಗಾರ್ತಿ ಪ್ರಜ್ಞಾ ಜಿಆರ್ ಕಚೇರಿಗೆ ಬರುತ್ತಿದ್ದರು. ಆಗ ಸುಮಾರು 88 ವರ್ಷದ ವಯೋವೃದ್ಧೆ 3 ಕಿಲೋ ಮೀಟರ್ ನಷ್ಟು ದೂರ ಬೆಟ್ಟ ಪ್ರದೇಶದಲ್ಲಿ ಬರಿಗಾಲಿನಲ್ಲಿ ನಡೆದು ನಿರಾಶ್ರಿತರ ಕೇಂದ್ರದತ್ತ ಹೋಗುತ್ತಿದ್ದರು. ಭೂ ಕುಸಿತದಲ್ಲಿ ಅವರ ಮನೆ ಹಾನಿಯಾಗಿ ಹೋಗಿತ್ತು. ನಿರಾಶ್ರಿತರ ಮನೆಯಡಿ ನಿಂತು ಮಳೆಗೆ ನಡುಗುತ್ತಿದ್ದರು.

ಅವರ ಪರಿಸ್ಥಿತಿ ನೋಡಿ ವರದಿಗಾರ್ತಿ ಮಡಿಕೇರಿಯಲ್ಲಿರುವ ತಮ್ಮ ಮನೆಗೆ ಬರುವಂತೆ ಕೇಳಿಕೊಂಡರು. ಅದರಂತೆ ವೃದ್ಧೆ ಬಂದರು. ನಂತರ ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು. ನಂತರ ವರದಿಗಾರ್ತಿ ಆಫೀಸಿಗೆ ಹಿಂತಿರುಗಿದಾಗ ಕಚೇರಿಯ ಸುತ್ತ ಒಂದು ಅಡಿ ನೀರು ತುಂಬಿಕೊಂಡಿತ್ತು. ಹೇಗೋ ಕಚೇರಿಯ ಒಳ ಹೋದರು.

''ಅಗತ್ಯ ದಾಖಲೆಗಳನ್ನು ತೆಗೆಯಲೆಂದು ಅತ್ತಿದ್ದಿಂತ ಓಡಾಡುತ್ತಿದ್ದೆವು. ಆಗ ನೋಡುನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕಚೇರಿಯ ಎದುರಿಗೆ ಭಾರೀ ಭೂಕುಸಿತವಾಗಿ ಟನ್ ಗಟ್ಟಲೆ ನೀರು ಹರಿಯಿತು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿ ಸುತ್ತಮುತ್ತ ನೀರು ತುಂಬಿ ಮೇಲೆ ಬರುತ್ತಿತ್ತು. ನಮ್ಮ ಕಚೇರಿ ನಾಯಿಯನ್ನು ಕರೆದುಕೊಂಡು ಮೇಲಿನ ಕಟ್ಟಡಕ್ಕೆ ಹೋದೆ. ಅಲ್ಲಿ ಸುಮಾರು 1 ಗಂಟೆ ಕಾದು ಕುಳಿತು ನೀರಿನ ಮಟ್ಟ ತಗ್ಗಿದ ಮೇಲೆ ಕೆಳಗಿಳಿದು ಬಂದೆವು. ಈ ಮಧ್ಯೆ ಜಿಲ್ಲಾಡಳಿತದ ತುರ್ತು ಸಂಖ್ಯೆಗೆ ನನ್ನ ತಂದೆ ಸಂಪರ್ಕಿಸಿದಾಗ ಸೂಕ್ತ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನಂತರ ಶಾಸಕ ಕೆಜಿ ಬೋಪಯ್ಯ ಅವರನ್ನು ಸಂಪರ್ಕಿಸಿದಾಗ ಅವರು ತಕ್ಷಣ ಎನ್ ಡಿಆರ್ ಎಫ್ ತಂಡ ನಮ್ಮನ್ನು ರಕ್ಷಿಸಲು ಕಳುಹಿಸಿದರು ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.