ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತನ ಕುಟುಂಬಕ್ಕೆ ಗಾರ್ಡಿಯನ್: ಏಕ್, ದೋ ತೀನ್ ಹೇಳಿ ಜೋಗ್ ಫಾಲ್ಸ್ ಹತ್ತಿದ್ದರು ವಾಜಪೇಯಿ!
ವಾಜಪೇಯಿ ಸೋತಿದ್ದಕ್ಕಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಶಿವಮೊಗ್ಗ ಜನತೆ ಇನ್ನೂ ಮರೆತಿಲ್ಲ, ...

Published On :
ಶಿವಮೊಗ್ಗ: 1984ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೋಲು ಅನುಭವಿಸಿದ್ದರು, ಈ ವೇಳೆ ವಾಜಪೇಯಿ ಸೋತಿದ್ದಕ್ಕಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಶಿವಮೊಗ್ಗ ಜನತೆ ಇನ್ನೂ ಮರೆತಿಲ್ಲ,
ಆತ್ಮ ಹತ್ಯೆ ಮಾಡಿಕೊಂಡ ವಿಚಾರವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ,ಎಚ್ ಶಂಕರಮೂರ್ತಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ತಿಳಿಸಿದ್ದರು, ಆ ವೇಳೆ ಫೋನ್ ಕಟ್ ಮಾಡಿದರು, ಅರ್ಧಗಂಟೆ ನಂತರ ಫೋನ್ ಮಾಡಿದ ಅವರು, ತಾವು ಶಿವಮೊಗ್ಗಕ್ಕೆ ಬರುತ್ತಿರುವುದಾಗಿ ತಿಳಿಸಿದರು, ಮಾರನೇ ದಿನ ಶಿವಮೊಗ್ಗಕ್ಕೆ ಬಂದ ಅವರು ಮೃತ ವ್ಯಕ್ತಿ ಲಕ್ಷ್ಮಿ ನಾರಾಯಣನ ಗುಡಿಸಲಿಗೆ ಬಂದು ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು,
ನಂತರ ದೆಹಲಿಗೆ ತೆರಳಿದ ಅವರು ಅಲ್ಲಿಂದ 25 ಸಾವಿರ ರು ಚೆಕ್ ಅನ್ನು ಲಕ್ಷ್ಮಿ ನಾರಾಯಣನ ಕುಟುಂಬಸ್ಥರಿಗೆ ನೀಡಿದರು, ಮತ್ತೆ ನನಗೆ ಕರೆ ಮಾಡಿ ನಾನು 25 ಸಾವಿರ ರು ಚೆಕ್ ಕಳುಹಿಸುತ್ತಿದ್ದೇನೆ, ಅದನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿ ಆತನ ತಂಗಿ ಮತ್ತು ತಮ್ಮನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಹೇಳಿದ್ದಾಗಿ ಶಂಕರಮೂರ್ತಿ ತಿಳಿಸಿದ್ದಾರೆ.
1968 ರಲ್ಲಿ ಶಿವಮೊಗ್ಗದಲ್ಲಿ ನಡೆದ ಜನಸಂಘ ಸಮಾವೇಶಕ್ಕೆ ವಾಜಪೇಯಿ ಆಗಮಿಸಿದ್ದರು. ಆ ವೇಳೆ ವಾಜಪೇಯಿ ಡಿ.ಎಚ್ ಶಂಕರ ಮೂರ್ತಿ ಮತ್ತು ಅವರ ಸಹೋದರ ಡಿ.ಎಚ್ ಸುಬ್ಬಣ್ಣ ಅವರ ಅವಿಭಕ್ತ ಕುಟುಂಬದೊಂದಿಗೆ ಇರುತ್ತಿದ್ದರು, 1968 ರಲ್ಲಿ ಶಿವಮೊಗ್ಗಕ್ಕೆ ಬಂದಾಗ ಜೋಗ್ ಫಾಲ್ಸ್ ವಾಜಪೇಯಿ ಭೇಟಿ ನೀಡಿದ್ದರು. ಏಕ್ ದೋ ತೀನ್ ಹೇಳಿಕೊಂಡು ಜೋಗ್ ಫಾಲ್ಸ್ ಏರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


