ರಾಜ್ಯ

ಸ್ವಾತಂತ್ರ ದಿನ ವಿಶೇಷ: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪದಕ

ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಪೋಲೀಸ್ ಸೇವೆಗೆ ನಿಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ 18 ಪೋಲೀಸ್ ಅಧಿಕಾರಿಗ?ಉ ಆಯ್ಕೆಯಾಗಿದ್ದಾರೆ.

ಸ್ವಾತಂತ್ರ ದಿನ ವಿಶೇಷ: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪದಕ
ಸ್ವಾತಂತ್ರ ದಿನ ವಿಶೇಷ: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪದಕ
Published On :
ಬೆಂಗಳೂರು: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಪೋಲೀಸ್ ಸೇವೆಗೆ ನಿಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ 18 ಪೋಲೀಸ್ ಅಧಿಕಾರಿಗ?ಉ ಆಯ್ಕೆಯಾಗಿದ್ದಾರೆ.
ಈ ಬಾರಿಯ ಸ್ವಾತಂತ್ರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ 942 ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ನೀಡಿ ಗೌರವಿಸಲಿದ್ದಾರೆ. ಪೊಲೀಸ್ ಶೌರ್ಯ ಪ್ರಶಸ್ತಿಗೆ 177 ಮಂದಿ; ವಿಶೇಷ ಸೇವೆಗೆ 88 ಮಂದಿ; ಹಾಗೂ ಉತ್ತಮ ಸೇವೆಗೆ 675 ಪೊಲೀಸ್ ಸಿಬ್ಬಂದಿಗಳು ರಾಷ್ಟ್ರಪತಿಗಳಿಂದ ಸನ್ಮಾನಿತರಾಗಲಿದ್ದಾರೆ.
Story image
Story image
ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರುವ ಡಿವೈಎಸ್​ಪಿ ಟಿ. ರಂಗಪ್ಪ ಸೇರಿ 11 ಡಿವೈಎಸ್ಪಿಗಳು ಮತ್ತು ಇತರೆ ಹಂತದ ಅಧಿಕಾರಿಗಳು ಸೇರಿದಂತೆ ಒಟ್ಟು 18 ಪೋಲೀಸ್ ಸಿಬ್ಬಂದಿಗೆ ಈ ಗೌರವ ಸಲ್ಲಲಿದೆ.
ರಾಷ್ಟ್ರಪತಿ ಪದಕ ಗಳಿಸಿರುವ ರಾಜ್ಯ ಪೋಲೀಸರ ಪಟ್ಟಿ ಹೀಗಿದೆ-
  • ಟಿ. ಸುಂದರರಾಜು- ಉಪಕಮಾಂಡೆಂಟ್, ಕೆಎಸ್‍ಆರ್‍ಪಿ ತುಮಕೂರು
  • ಎಂ.ಎನ್. ಕರಿಬಸವನಗೌಡ – ಎಸಿಪಿ, ಮೈಕ್ರೋಲೇಔಟ್ ಉಪವಿಭಾಗ, ಬೆಂಗಳೂರು
  • ಸಿ.ಗೋಪಾಲ್-ಎಸಿಪಿ, ಎನ್.ಆರ್. ಉಪವಿಭಾಗ, ಮೈಸೂರು
  • ಕೆ.ಪುರುಷೋತ್ತಮ್- ಡಿವೈಎಸ್‍ಪಿ, ಸಿಐಡಿ, ಬೆಂಗಳೂರು
  • ಟಿ.ರಂಗಪ್ಪ- ಡಿವೈಎಸ್‍ಪಿ, ಎಸ್‍ಐಟಿ, ಬೆಂಗಳೂರು ನಗರ
  • ಟಿ.ಕೋದಂಡರಾಮಯ್ಯ- ಡಿವೈಎಸ್‍ಪಿ, ಎಸಿಬಿ, ಬೆಂಗಳೂರು
  • ಉಮೇಶ್ ಗಣಪತಿ ಶೇಟ್-ಡಿವೈಎಸ್‍ಪಿ, ಎಸಿಬಿ, ಮೈಸೂರು
  • ರುದ್ರಪ್ಪ ಎಸ್.ಉಜ್ಜನಕೊಪ್ಪ- ಡಿವೈಎಸ್‍ಪಿ, ಎಸಿಬಿ, ಕೊಪ್ಪಳ
  • ಮಂಜುನಾಥ ಕೆ.ಗಂಗಲ್, ಡಿವೈಎಸ್‍ಪಿ, ದಾವಣಗೆರೆ ಗ್ರಾಮಾಂತರ
  • ಎಂ.ಬಾಬು, ಡಿವೈಎಸ್‍ಪಿ,( ಸಿಟಿ ಎಸ್‍ಪಿ) ದಾವಣಗೆರೆ ನಗರ
  • ಸದಾನಂದ ಎ. ತಿಪ್ಪಣ್ಣನವರ್- ಡಿವೈಎಸ್‍ಪಿ, ಅರಸೀಕೆರೆ ಉಪವಿಭಾಗ, ಹಾಸನ
  • ಸುಧೀರ್ ಎಸ್.ಶೆಟ್ಟಿ- ಪೊಲೀಸ್ ಇನ್ಸ್‍ಪೆಕ್ಟರ್ , ಸಿಐಡಿ, ಬೆಂಗಳೂರು
  • ಸೋಮಶೇಖರ್.ಎನ್- ಪೊಲೀಸ್ ಇನ್ಸ್‍ಪೆಕ್ಟರ್, (ಎಫ್‍ಪಿಆರ್) ಕೋಲಾರ
  • ಟಿ.ಎನ್. ನಾಗಭೂಷಣ್, ಎಎಸ್‍ಐ, ಸಿಐಡಿ, ಬೆಂಗಳೂರು
  • ಸಿ.ಕೋಮಲಾಚಾರ್, ಎಎಸ್‍ಐ, ರಾಣೆಬೆನ್ನೂರು, ಹಾವೇರಿ
  • ಎಚ್.ಎಂ.ಪಾಪಣ್ಣ- ಎಆರ್‍ಎಸ್‍ಐ, ಕೆಎಸ್‍ಆರ್‍ಪಿ
  • ಸಿದ್ದಲಿಂಗೇಶ್ವರ – ಹೆಡ್ ಕಾನ್ಸ್‍ಸ್ಟೇಬಲ್, ವಿದ್ಯಾರಣ್ಯಪುರ, ಬೆಂಗಳೂರು,
  • ಶಿವಪ್ಪ ಮಲ್ಲಿಕಜಪ್ಪಬಿಳಿಗಿ, ಹೆಡ್ ಕಾನ್ಸ್‍ಸ್ಟೇಬಲ್, 5ನೆ ಬೆಟಾಲಿಯನ್, ಕೆಎಸ್‍ಆರ್‍ಪಿ, ಮೈಸೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.