ರಾಜ್ಯ

ಗದಗ: ಮದ್ಯದ ಅಮಲೇರಿ ನಡುಬೀದಿಯಲ್ಲೇ ಕಿತ್ತಾಡಿಕೊಂಡ ಪೋಲೀಸ್ ಪೇದೆಗಳು, ವೀಡಿಯೋ ವೈರಲ್

ಕುಡಿದ ಮತ್ತಿನಲ್ಲಿದ್ದ ಇಬ್ಬರು ಪೋಲೀಸ್ ಪೇದೆಗಳು ಬೀದಿಯಲ್ಲೇ ಜಗಳವಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಬೆಟಗೇರಿಯಲ್ಲಿ ನಡೆದಿದೆ.

ಗದಗ: ಮದ್ಯದ ಅಮಲೇರಿ ನಡುಬೀದಿಯಲ್ಲೇ ಕಿತ್ತಾಡಿಕೊಂಡ ಪೋಲೀಸ್ ಪೇದೆಗಳು, ವೀಡಿಯೋ ವೈರಲ್
ಪೋಲೀಸ್ ಪೇದೆಗಳ ಕಿತ್ತಾಟದ ದೃಶ್ಯ
Published On :
ಗದಗ: ಕುಡಿದ ಮತ್ತಿನಲ್ಲಿದ್ದ ಇಬ್ಬರು ಪೋಲೀಸ್ ಪೇದೆಗಳು ಬೀದಿಯಲ್ಲೇ ಜಗಳವಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಬೆಟಗೇರಿಯಲ್ಲಿ ನಡೆದಿದೆ.
ಕಾನೂನು ಪಾಲಿಸಬೇಕಾದ ಪೋಲೀಸರೇ ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲಿ ಕಿತ್ತಾಡಿಕೊಂಡಿರುವ ಪ್ರಸಂಗ ಬೆಟಗೇರಿ ಬಳಿಯ ಸಹಸ್ರಾರ್ಜುನ ವೃತ್ತದಲ್ಲಿ ನಡೆದಿದ್ದು ಬುಧವಾರ ನಡೆದ ಘಟನೆಯ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಮಹಿಳಾ ಠಾಣೆಯ ಪೇದೆ ಶರಣಪ್ಪ ಬಸಾಪುರ ಹಾಗೂ ಗ್ರಾಮೀಣ ಠಾಣೆಯ ಪೇದೆ ಮಂಜುನಾಥ ಬಾರಕೇರ್ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಕಿತ್ತಾಡಿಕೊಂಡ ಪೇದೆಗಳಾಗಿದ್ದು ಸಾರ್ವಜನಿಕರಿಗೆ ಉಚಿತ ಮನರಂಜನೆ ನೀಡಿದ್ದಾರೆ. 
ಸ್ಥಳೀಯರು ಇಬ್ಬರ ಜಗಳವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ, ಈ ವೀಡಿಯೋ ನೋಡಿದ ನೂರಾರು ಮಂದಿ ಹೀಗೆ ಅಸಭ್ಯವಾಗಿ ವರ್ತಿಸಿದ ಪೇದೆಗಳ ವಿರುದ್ಧ ಕ್ರಮ ಜರುಗಿಸಿ ಎಂದು ಪೋಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಕಿತ್ತಾಟದ ವಿಷಯ ತಿಳಿಯುತ್ತಿದ್ದಂತೆ ಜಾಗೃತರಾದ ಎಸ್‌ಪಿ ಸಂತೋಷ್‌ ಬಾಬು ಇಬ್ಬರೂ ಪೇದೆಗಳನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ. ಅಲ್ಲದೆ ಕುಡಿದು ಬೀದಿರಂಪ ಮಾಡಿದ ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.