ರಾಜ್ಯ

ನಾನು ಹಣದ ಗಿಡ ನೆಟ್ಟಿಲ್ಲ, ನನ್ನ ಕಷ್ಟ ನನಗೇ ಗೊತ್ತು: ಹೆಚ್ ಡಿ ಕುಮಾರಸ್ವಾಮಿ

ಮುಖ್ಯಮಂತ್ರಿಯಾದ ನಂತರ ಹಲವು ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಕಷ್ಟಗಳನ್ನೇ ಹೇಳಿಕೊಂಡು ಸುದ್ದಿಯಾಗುತ್ತಿರುವ ಸಿಎಂ ಕುಮಾರಸ್ವಾಮಿ ಈಗ ಮತ್ತೊಂದು ಅಂಥಹದ್ದೇ ಹೇಳಿಕೆ ನೀಡಿದ್ದಾರೆ.

ನಾನು ಹಣದ ಗಿಡ ನೆಟ್ಟಿಲ್ಲ, ನನ್ನ ಕಷ್ಟ ನನಗೇ ಗೊತ್ತು: ಹೆಚ್ ಡಿ ಕುಮಾರಸ್ವಾಮಿ
ನಾನು ಹಣದ ಗಿಡ ನೆಟ್ಟಿಲ್ಲ, ನನ್ನ ಕಷ್ಟ ನನಗೇ ಗೊತ್ತು: ಹೆಚ್ ಡಿಕೆ
Published On :
ಬೆಂಗಳೂರು: ಮುಖ್ಯಮಂತ್ರಿಯಾದ ನಂತರ ಹಲವು ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಕಷ್ಟಗಳನ್ನೇ ಹೇಳಿಕೊಂಡು ಸುದ್ದಿಯಾಗುತ್ತಿರುವ ಸಿಎಂ ಕುಮಾರಸ್ವಾಮಿ ಈಗ ಮತ್ತೊಂದು ಅಂಥಹದ್ದೇ ಹೇಳಿಕೆ ನೀಡಿದ್ದಾರೆ. 
ಬೆಂಗಳೂರಿನಲ್ಲಿ ಆ.09 ರಂದು ನಡೆದ ಆದಿವಾಸಿಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ವಿಷಯದ ಬಗ್ಗೆಯೂ ಪ್ರಸ್ತಾಪಿಸಿದ್ದು, ನನ್ನ ನೋವು ಹೇಳಿಕೊಳ್ಳುವಂತಿಲ್ಲ ಎಂದಿದ್ದಾರೆ. " ರೈತರ ಸಾಲ ಮನ್ನ ವಿಚಾರವನ್ನು ಮರೆತಿಲ್ಲ. ರೈತರ ಖಾತೆಗೆ ರಾತ್ರೋರಾತ್ರಿ ಹಣ ಹಾಕುವುದಕ್ಕೆ ಸಾಧ್ಯವಿಲ್ಲ. ನಾನು ಹಣದ ಗಿಡ ನೆಟ್ಟಿಲ್ಲ, ನನ್ನ ಕಷ್ಟ ನನಗೇ ಗೊತ್ತು ಎಂದು ಮತ್ತೊಮ್ಮೆ ತಾವು ಎದುರಿಸುತ್ತಿರುವ ಸ್ಥಿತಿಯನ್ನು ಜನತೆ ಎದುರು ಹೇಳಿಕೊಂಡಿದ್ದಾರೆ. 
ಇದೇ ವೇಳೆ ಈ ಹಿಂದಿನ ಸರ್ಕಾರ  ಶಾದಿ ಭಾಗ್ಯ ಯೋಜನೆಗೆ ಮೀಸಲಿಟ್ಟಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂಬ ಊಹಾಪೋಹಗಳ ಬಗ್ಗೆಯೂ ಸ್ಪಷ್ಟನೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ,  ಶಾದಿ ಭಾಗ್ಯ ಅನುದಾನ ಕಡಿತಗೊಲಿಸಿಲ್ಲ ನಾನು ತಪ್ಪು ಮಾಡದೇ ನನ್ನ ಮೇಲೆ ತಪ್ಪು ಹೊರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.