ಗೌರಿ ಲಂಕೇಶ್ ಪ್ರಕರಣ: ಬೆಳಗಾವಿ ಹೋಟೆಲ್ ಉದ್ಯಮಿ ಅರೆಸ್ಟ್!
ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಕಾ ತಂಡ ಬೆಳಗಾವಿಯಲ್ಲಿ ಇನ್ನೋರ್ವ ಹಿಂದೂ ಪರ ಕಾರ್ಯಕರ್ತ ಭರತ್ ಕುರ್ವೆಯನ್ನು ಬಂಧಿಸಿದೆ

Published On :
ಬೆಳಗಾವಿ/ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಕಾ ತಂಡ ಬೆಳಗಾವಿಯಲ್ಲಿ ಇನ್ನೋರ್ವ ಹಿಂದೂ ಪರ ಕಾರ್ಯಕರ್ತ ಭರತ್ ಕುರ್ವೆಯನ್ನು ಬಂಧಿಸಿದೆ. ಬೆಳಗಾವಿಯಲ್ಲಿರುವ ಸಂಭಾಜಿ ಗಲ್ಲಿಯ ನಿವಾಸಿ ಭರತ್ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಈತ ಕೊಲೆಯ ಯೋಜನೆ ರೂಪಿಸಿದ್ದನೆನ್ನಲಾದ ಅಮುಲ್ ಕಾಳೆ ಅವನೊಂದಿಗೆ ಸಂಪರ್ಕದಲ್ಲಿದ್ದರೆಂದು ಹೇಳಲಾಗಿದೆ.
ಇಷ್ಟಲ್ಲದೆ ಶೂಟರ್ ಪರಶುರಾಮ ವಾಗ್ಮೊರೆ ಸಹ ವಿಚಾರಣೆ ಸಮಯದಲ್ಲಿ ಭರತ್ ಹೆಸರನ್ನು ಹೇಳಿದ್ದನೆಂದು ತಿಳಿದು ಬಂದಿದೆ. "ಇದುವರೆಗೆ ಕೊಲೆಯಲ್ಲಿ ಭಾಗಿಯಾಗಿರುವಕುರಿತಂತೆ ಭರತ್ ವಿರುದ್ಧ ಯಾವ ಸಾಕ್ಷಿಗಳು ಸಿಕ್ಕಿಲ್ಲವಾದರೂ ವಾಗ್ಮೊರೆ ಹಾಗೂ ಕಾಳೆ ನಿಡಿದ್ದ ಸುಳಿವಿನ ಆಧಾರದ ಮೇಲೆ ಇವರ ಬಂಧನವಾಗಿದೆ.`ಬೆಳಗಾವಿಯಲ್ಲಿ ಬಂಧಿತರಾದ ಭರತ್ ನನ್ನು ವಿಚಾರಣೆಗಾಗಿ ಬೆಂಗಳೂರಿನ ಸಿಐಡಿ ಕಚೇರಿಗೆ ಕರೆದೊಯ್ಯಲಾಗುತ್ತದೆ. ಖಾನಾಪುರದ ಅರಣ್ಯದಲ್ಲಿ ವಾಗ್ಮೊರೆ ಬಂದೂಕಿನ ಮೂಲಕ ಶೂಟಿಂಗ್ ತರಬೇತಿ ಪಡೆಯುವಾಗ ಭರತ್ ಅವನಿಗೆ ಆಶ್ರಯ ನೀಡಿದ್ದ" ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕೂ ಮುನ್ನ ಎಸ್ಐಟಿ ತಂಡ ಖಾನಾಪುರ ಅರಣ್ಯ ಪ್ರದೇಶದಲ್ಲಿ ಹಲವು ಸ್ಥಳಕ್ಕೆ ಭೇಟಿ ಕೊಟ್ಟಿದೆ.ವಾಗ್ಮೊರೆ ತರಬೇತಿ ಪಡೆದ ಸ್ಥಳಗಳನ್ನು ಸುತ್ತಿ ಮಾಹಿತಿ ಕಲೆ ಹಾಕಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಭರತ್ ಆಶ್ರಯ ಕಲ್ಪಿಸಿದ್ದನೆನ್ನಲಾಗಿದ್ದು ಗೌರಿ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಇದುವರೆಗೆ ಹನ್ನೊಂದು ಜನರನ್ನು ಬಂಧಿಸಿದೆ. ಮುಖ್ಯ ಆರೋಪಿಯಾದ ಮಹಾರಾಷ್ಟ್ರ ಮೂಲದ ನಿಹಾಲ್ ಅಲಿಯಾಸ್ ದಾದಾ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SITಎಸ್ಐಟಿGauri Lankesh murder caseಗೌರಿ ಲಂಕೇಶ್ ಕೊಲೆ ಪ್ರಕರಣAmol Kaleಅಮೋಲ್ ಕಾಳೆBelagavi hotelierಬೆಳಗಾವಿ ಹೋಟೆಲ್ ಉದ್ಯಮಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


