ವಿದ್ಯಾರ್ಥಿಗಳೇ ಎಚ್ಚರ: ರಾಜ್ಯದಲ್ಲಿವೆ 23 ನಕಲಿ ಎಂಜನೀಯರ್ ಕಾಲೇಜು!
ದೇಶದಲ್ಲಿರುವ ನಕಲಿ ಕಾಲೇಜುಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 23 ನಕಲಿ ಎಂಜಿನೀಯರಿಂಗ್ ಕಾಲೇಜುಗಳಿವೆ

Published On :
ಬೆಂಗಳೂರು: ದೇಶದಲ್ಲಿರುವ ನಕಲಿ ಕಾಲೇಜುಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 23 ನಕಲಿ ಎಂಜಿನೀಯರಿಂಗ್ ಕಾಲೇಜುಗಳಿವೆ, ಈ ಕಾಲೇಜುಗಳು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಅನಮೋದನೆ ಪಡೆದಿಲ್ಲ ಎಂದು ತಿಳಿದು ಬಂದಿದೆ.
ಈ ಮಾಹಿತಿಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ, ದೇಶದಲ್ಲಿ ಒಟ್ಟು 227 ನಕಲಿ ಎಂಜಿನೀಯರಿಂಗ್ ಕಾಲೇಜುಗಳಿದ್ದು, ಅದರಲ್ಲಿ ಕರ್ನಾಟಕ ರಾಜ್ಯದಲ್ಲೇ 23 ನಕಲಿ ಸಂಸ್ಥೆಗಳಿವೆ.
ಈ ನಕಲಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪದವಿಗೆ ಯಾವುದೇ ಮೌಲ್ಯವಿರುವುದಿಲ್ಲ, ಅವರು ಯಾವುದೇ ಸರ್ಕಾರಿ ನೌಕರಿಗೂ ಪರಿಗಣಿಸುವುದಿಲ್ಲ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧಿಕಾರಿ ತಿಳಿಸಿದ್ದಾರೆ,
ಭಾರತದಲ್ಲಿರುವ 24 ನಕಲಿ ವಿಶ್ವ ವಿದ್ಯಾನಿಲಯಗಳಿದ್ದು, ಅದರಲ್ಲಿ ಕರ್ನಾಟಕದಲ್ಲಿ ಒಂದು ನಕಲಿ ವಿವಿಯಿದೆ. ಬೆಳಗಾವಿಯ ಗೋಕಾಕ್ ನಲ್ಲಿರುವ ಬಾದಾಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ, ನಕಲಿ ವಿವಿ ಎಂದು ವರದಿಯಲ್ಲಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnataka4ನೇ ಸ್ಥಾನfake collegesfourth position23 engineering colleges. ಕರ್ನಾಟಕಎಂಜಿನೀಯರಿಂಗ್ ನಕಲಿ ಕಾಲೇಜು23 ನಕಲಿ ಎಂಜನೀಯರಿಂಗ್ ಕಾಲೇಜು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


