ಗೇಮ್ ಆಫ್ ಥ್ರಾನ್ಸ್ ಶೈಲಿಯಲ್ಲಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವುದನ್ನು ಘೋಷಿಸಿದ ಬಿಜೆಪಿ
ಮೇ.1 ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಗಮನವನ್ನು ರಾಜ್ಯ ಬಿಜೆಪಿ ಗೇಮ್ ಆಫ್ ಥ್ರಾನ್ಸ್ ಶೈಲಿಯಲ್ಲಿ ಘೋಷಣೆ ಮಾಡಿದೆ.

Published On :
ಬೆಂಗಳೂರು: ಮೇ.1 ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಗಮನವನ್ನು ರಾಜ್ಯ ಬಿಜೆಪಿ ಗೇಮ್ ಆಫ್ ಥ್ರಾನ್ಸ್ ಶೈಲಿಯಲ್ಲಿ ಘೋಷಣೆ ಮಾಡಿದೆ.
ಬಿಜೆಪಿ ಕರ್ನಾಟಕದ ಟ್ವಿಟರ್ ಹ್ಯಾಂಡಲ್ ನಲ್ಲಿ ಮೋದಿ ಅವರ ಪೂರ್ವ ನಿಗದಿತ ಉಡುಪಿ ಪ್ರವಾಸದ ಬಗ್ಗೆ ಅಮೆರಿಕದಾದ್ಯಂತ ಪ್ರಸಿದ್ಧಿ ಪಡೆದಿರುವ ಗೇಮ್ ಆಫ್ ಥ್ರಾನ್ಸ್ ಶೈಲಿಯಲ್ಲಿ ಘೋಷಣೆ ಮಾಡಿದೆ.
ಮೇ.1 ರಂದು ಉಡುಪಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಉಡುಪಿ ಕೃಷ್ಣಮಠಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಉಡುಪಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿ ಪ್ರಧಾನಿ ಪ್ರವಾಸವನ್ನು ಗೇಮ್ ಆಫ್ ಥ್ರಾನ್ಸ್ ಶೈಲಿಯಲ್ಲಿ ಘೋಷಿಸುವುದಕ್ಕೂ ಟ್ವಿಟರ್ ಬಳಕೆದಾರರಿಂದ ಪ್ರಶ್ನೆಗಳು ಎದುರಾಗಿದೆ. ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಪ್ರಧಾನಿಯಿಂದ 12 ರ್ಯಾಲಿಗಳನ್ನು ನಡೆಸಲು ಯೋಜನೆ ರೂಪಿಸಿದ್ದು, ಈ ಪೈಕಿ ಉಡುಪಿ ರ್ಯಾಲಿಯೂ ಒಂದಾಗಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನರೇಂದ್ರ ಮೋದಿbjpಬಿಜೆಪಿKarnataka assembly elections 2018PM\'s visitGame of Thrones styleರಾಜ್ಯ ವಿಧಾನಸಭಾ ಚುನಾವಣೆ 2018ಗೇಮ್ ಆಫ್ ಥ್ರಾನ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


