ರಾಜ್ಯ

ಸಿನಿಮಾ ಶೈಲಿಯಲ್ಲಿ ಪೊಲೀಸರಿಂದ ಎಸ್ಕೇಪ್ ಆದ ನಕಲಿ ಎಂಎಲ್ ಸಿ ಸೋಮಣ್ಣ!

ನಾನಾ ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುವ ನಕಲಿ ಎಂಎಲ್‌ಸಿ ಎಲ್.ಸೋಮಣ್ಣ ಚಿತ್ರದುರ್ಗದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ...

ಸಿನಿಮಾ ಶೈಲಿಯಲ್ಲಿ ಪೊಲೀಸರಿಂದ ಎಸ್ಕೇಪ್ ಆದ ನಕಲಿ ಎಂಎಲ್ ಸಿ ಸೋಮಣ್ಣ!
ಆರೋಪಿ ಸೋಮಣ್ಣ
Published On :
ಬೆಂಗಳೂರು: ನಾನಾ ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುವ ನಕಲಿ ಎಂಎಲ್‌ಸಿ ಎಲ್.ಸೋಮಣ್ಣ ಚಿತ್ರದುರ್ಗದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ವೊಂದರ ಪರಿಶೀಲನೆಗೆಂದು ಕರೆ ತಂದಿದ್ದ ವೇಳೆ ಈ ಘಟನೆ ನಡೆದಿದೆ. 
ನಗರದ ಹೊಳಲ್ಕೆರೆ ರಸ್ತೆಯಲ್ಲಿ ಹೆಡ್‌ಪೋಸ್ಟ್ ಆಫೀಸಿನ ಆವರಣಕ್ಕೆ ಹೊಂದಿಕೊಂಡಿರುವ ಮಹಾಲಕ್ಷ್ಮೀ ಜ್ಯುಯಲರ್ಸ್‌ಗೆ ಬೆಂಗಳೂರು ಪೊಲೀಸರು ಸಂಜೆ 7.55 ರ ಸುಮಾರಿಗೆ ಸೋಮಣ್ಣನನ್ನು ಕರೆತಂದಿದ್ದಾರೆ.
ಪರಿಶೀಲನೆ ನಡೆಯುತ್ತಿದ್ದ ವೇಳೆ ಆರೋಪಿ ಎಲ್. ಸೋಮಣ್ಣ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿದ್ದಾನೆ. ಆತನ ಕೋರಿಕೆಯನ್ನು ಮನ್ನಿಸಿದ ಪೊಲೀಸರು ಪೇದೆ ಚಂದ್ರು ಎಂಬಾತನ ಜತೆ ಜ್ಯುಯಲರ್ಸ್‌ ಹಿಂಭಾಗದ ಶೌಚಾಲಯಕ್ಕೆ ಕಳುಹಿಸಿದ್ದಾರೆ. 
10 ನಿಮಿಷವಾದರೂ ವಾಪಸ್ ಬರದಿದ್ದಾಗ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಆತ ಅಲ್ಲಿ ಇಲ್ಲದ್ದನ್ನು ನೋಡಿದ ಪೊಲೀಸರು ಪರಿಶೀಲನೆ ನಡೆಯುವ ವೇಳೆ ಆತ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಆತನ ಕೈಗೆ ಹ್ಯಾಂಡ್ ಕಪ್ ಹಾಕಿದ್ದು, ಸ್ಥಳೀಯ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೀಘ್ರವೇ ಆತನನ್ನು ಬಂಧಿಸಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.