ಈ ವರ್ಷ ಪಿಯುಸಿ ತರಗತಿಗಳು ಮೇ ತಿಂಗಳಿನಲ್ಲಿಯೇ ಆರಂಭ
ಈ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ತರಗತಿಗಳು ನಿಗದಿತ ಅವಧಿಗಿಂತ ಒಂದು ವಾರಕ್ಕೆ ಮೊದಲೇ ...

ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ತರಗತಿಗಳು ನಿಗದಿತ ಅವಧಿಗಿಂತ ಒಂದು ವಾರಕ್ಕೆ ಮೊದಲೇ ಆರಂಭವಾಗಲಿದೆ. ಸಾಮಾನ್ಯವಾಗಿ ಶಾಲೆ-ಕಾಲೇಜುಗಳು ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ. ಆದರೆ ಈ ವರ್ಷ ದ್ವಿತೀಯ ಪಿಯುಸಿ ತರಗತಿಗಳು ಮೇ 2ಕ್ಕೆ ಮತ್ತು ಮೊದಲ ಪಿಯುಸಿ ತರಗತಿಗಳು ಮೇ 14ಕ್ಕೆ ಆರಂಭವಾಗಲಿದೆ.
ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮೊದಲೇ ಸಜ್ಜುಗೊಳಿಸಲು ಮತ್ತು ಖಾಸಗಿ ಕಾಲೇಜುಗಳ ಜೊತೆ ಸಮಾನವಾಗಿ ತರಲು ಪದವಿಪೂರ್ವ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಳ್ಳುತ್ತಿದೆ.
ತರಗತಿ ಬೇಗ ಆರಂಭವಾಗಲು ಇನ್ನೊಂದು ಮುಖ್ಯ ಕಾರಣ ಈ ಬಾರಿ ಚುನಾವಣೆ ಇರುವುದರಿಂದ ಪಿಯುಸಿ ಪರೀಕ್ಷೆಗಳು ಬೇಗನೆ ಮುಗಿದಿದ್ದವು. ಮೊದಲ ಪಿಯುಸಿ ಪರೀಕ್ಷೆ ಈ ವರ್ಷ ಫೆಬ್ರವರಿ 21ಕ್ಕೆ ಮುಗಿಯಿತು ವಿದ್ಯಾರ್ಥಿಗಳಿಂದ 69 ದಿನಗಳ ಬೇಸಿಗೆ ರಜೆ ಸಿಕ್ಕಿದೆ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


