ಅಭಿಮಾನಿಯೊಬ್ಬ ಎಸೆದ ಹಾರ ರಾಹುಲ್ ಕೊರಳಿಗೆ: ವಿಡಿಯೋ ವೈರಲ್
ತುಮಕೂರಿನಲ್ಲಿ ಜನಾಶೀರ್ವಾದ ಯಾತ್ರೆ ವೇಳೆ ಅಭಿಮಾನಿಯೊಬ್ಬ ಎಸೆದ ಹಾರ ಅನಿರೀಕ್ಷಿತವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೊರಳಿಗೆ ಬಿದ್ದಿದ್ದು ಈ...

Published On :
ತುಮಕೂರು: ತುಮಕೂರಿನಲ್ಲಿ ಜನಾಶೀರ್ವಾದ ಯಾತ್ರೆ ವೇಳೆ ಅಭಿಮಾನಿಯೊಬ್ಬ ಎಸೆದ ಹಾರ ಅನಿರೀಕ್ಷಿತವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೊರಳಿಗೆ ಬಿದ್ದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸುತ್ತಿದ್ದರು. ಭದ್ರತಾ ದೃಷ್ಟಿಯಿಂದಾಗಿ ಯಾರು ಹತ್ತಿರ ಹೋಗಿ ಹಾರ ಹಾಕುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ರಸ್ತೆ ಬದಿ ನಿಂತಿದ್ದ ಅಭಿಮಾನಿಯೊಬ್ಬ ಹೂವಿನ ಹಾರವನ್ನು ನೇರವಾಗಿ ರಾಹುಲ್ ಅವರ ಕಡೆ ಎಸೆದಿದ್ದಾರೆ. ಆ ಹಾರ ರಾಹುಲ್ ಗಾಂಧಿ ಅವರ ಕೊರಳಿಗೆ ಬಿದ್ದಿದೆ.
ಈ ವಿಡಿಯೋವನ್ನು ಕಾಂಗ್ರೆಸ್ ಐಟಿ ಸೆಲ್ ನ ಮುಖ್ಯಸ್ಥೆ ರಮ್ಯಾ ಕರ್ನಾಟಕಾಸ್ ಗಾಟ್ ಟ್ಯಾಲೆಂಟ್ ಎಂಬ ಶೀರ್ಷಿಕೆಯಡಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾವಿರಕ್ಕೂ ಹೆಚ್ಚು ರೀಟ್ವೀಟ್ ಗಳು ಬಂದಿದ್ದು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
Karnataka’s got talent!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Ramyaರಮ್ಯಾRahul Gandhiರಾಹುಲ್ ಗಾಂಧಿತುಮಕೂರುTumakuruಜನಾಶೀರ್ವಾದ ಯಾತ್ರೆJanashirvada Yatra
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


