ತುಮಕೂರು: ತ್ರಿವಿಧ ದಾಸೋಹಿಗೆ 111 ಗುಲಾಬಿ ನೀಡಿದ ರಾಹುಲ್ ಗಾಂಧಿ
ಅಜ್ಜಿ ಇಂದಿರಾ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದಗಂಗಾ ಮಠದ...

Published On :
ತುಮಕೂರು: ಅಜ್ಜಿ ಇಂದಿರಾ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದಗಂಗಾ ಮಠದ 111 ವರ್ಷದ ಶಿವಕುಮಾರ ಸ್ವಾಮಿಜಿಗಳ ಆಶೀರ್ವಾದ ಪಡೆದಿದ್ದಾರೆ.
ಬುಧವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶ್ರೀಗಳ ಆಶೀರ್ವಾದ ಪಡೆದರು. ಸುಮಾರು 4ಗಂಟೆ ಸಮಯಕ್ಕೆ ಮಠಕ್ಕೆ ಬಂದ ರಾಹುಲ್ 30 ನಿಮಿಷಗಳ ಕಾಲ ಅಲ್ಲಿಯೆ ಸಮಯ ಕಳೆದರು. ಏಪ್ರಿಲ್ 1 ರಂದು 111ನೇ ವರ್ಷಕ್ಕೆ ಶ್ರೀಗಳು ಕಾಲಿಟ್ಟ ಹಿನ್ನೆಲೆಯಲ್ಲಿ ರಾಹುಲ್ 111 ಗುಲಾಬಿ ಹೂಗಳನ್ನು ನೀಡಿದರು.
ರಾಹುಲ್ ಗಾಂದಿಗೆ ಶಾಲು ಹೊದಿಸಿ ಸ್ವಾಗತಿಸಿದ ಶ್ರೀಗಳು, ಅವರಿಗೆ ಡ್ರೈ ಫ್ರೂಟ್ಸ್ ನೀಡಿ ಹೂವಿನ ಹಾರ ಹಾಕಿದರು. ಇದೇ ವೇಳೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಶ್ರೀಗಳ ಆಶೀರ್ವಾದ ಪಡೆದ ಫೋಟೋ ತೋರಿಸಿದ ರಾಹುಲ್ ನನ್ನ ಅಜ್ಜಿ ಮತ್ತು ನನ್ನ ತಾಯಿ ಅವರಿಗೆ ಕೂಡ ನೀವು ಆಶೀರ್ವದಿಸಿದ್ದೀರಾ, ನನಗೆ ಯಾವಾಗಲೂ ನಿಮ್ಮ ಆಶೀರ್ವಾದ ಬೇಕು ಎಂದು ರಾಹುಲ್ ಗಾಂಧಿ ಸ್ವಾಮಿಜಿಗಳಿಗೆ ತಿಳಿಸಿದರು.
ಮಠದ ಕಿರಿಯ ಸ್ವಾಮೀಜಿ ಸಿದ್ದಲಿಂಗಾ ಶ್ರೀಗಳು ರಾಹುಲ್ ಗಾಂಧಿ ತಲೆಯ ಮೇಲೆ ಅಕ್ಷತೆ ಹಾಕಿ ಆಶೀರ್ವದಿಸಿದರು. ಇನ್ನೂ ತುಮಕೂರಿನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಹಲವು ಮಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rahul Gandhiರಾಹುಲ್ ಗಾಂಧಿTumkurತುಮಕೂರುShivakumara Swamijiಸಿದ್ದಗಂಗಾ ಮಠಶಿವಕುಮಾರ ಸ್ವಾಮಿಜಿf Siddaganga Mutt
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


