ರಾಜ್ಯ

ಚುನಾವಣಾ ನೀತಿ ಸಂಹಿತೆಯಿಂದ ಯಕ್ಷಗಾನ ಕಲಾವಿದರಲ್ಲಿ ಅಸಮಾಧಾನ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರಾಜಕೀಯ ...

ಚುನಾವಣಾ ನೀತಿ ಸಂಹಿತೆಯಿಂದ ಯಕ್ಷಗಾನ ಕಲಾವಿದರಲ್ಲಿ ಅಸಮಾಧಾನ
ಮಂಗಳೂರಿನಲ್ಲಿ ಪ್ರದರ್ಶನದಲ್ಲಿ ಯಕ್ಷಗಾನ ಕಲಾವಿದರು
Published On :

ಮಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರಾಜಕೀಯ ಉದ್ದೇಶಗಳಿಗೆ ಕಾರ್ಯಕ್ರಮ ನಡೆಸುವುದಿಲ್ಲವೆಂದು ಸಂಬಂಧಪಟ್ಟ ರಿಟರ್ನಿಂಗ್ ಆಫೀಸರ್ ಗೆ ಹೇಳಿಕೆ ಬರೆದುಕೊಟ್ಟು ಸಹಿ ಮಾಡಬೇಕೆಂದು ಯಕ್ಷಗಾನ ಕಾರ್ಯಕ್ರಮ ಸಂಘಟಕರಿಗೆ ಹೇಳಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರಲ್ಲಿ ನೋವುಂಟುಮಾಡಿದೆ.

ನವೆಂಬರ್ ನಿಂದ ಮೇಯವರೆಗೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ನೀಡುವ ಸೀಸನ್ ಆಗಿದ್ದು  ಈ ಸಂದರ್ಭದಲ್ಲಿ ಕಟೀಲು, ಮಂದರ್ತಿಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನಿಟ್ಟರೆ ಸಾವಿರಾರು ಜನರು ಬರುತ್ತಾರೆ. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ತಮಗೆ ಸಿಗುವ ಅವಕಾಶಗಳು ಕಡಿಮೆಯಾಗಬಹುದು ಎಂಬ ಆತಂಕ ಕಲಾವಿದರದ್ದು.

ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣೆ ಸಂದರ್ಭದಲ್ಲಿ ಹೀಗೆ ಯಕ್ಷಗಾನ ಕಲಾವಿದರಿಗೆ ನಿಯಮ ಬಂದಿದ್ದು ಇದೇ ಮೊದಲು. ಇದು ಅನಗತ್ಯ ಮತ್ತು ಅಸಾಧ್ಯ ಕೂಡ. ಯಕ್ಷಗಾನ ಪ್ರದರ್ಶನದಲ್ಲಿ ರಾಜಕೀಯ ಇಣಕುವ ಉದಾಹರಣೆಗಳಿಲ್ಲ ಎನ್ನುತ್ತಾರೆ. ಉಡುಪಿ ಜಿಲ್ಲಾಡಳಿತ ಯಕ್ಷಗಾನ ಪ್ರದರ್ಶನಕ್ಕೆ ಸಂಘಟಕರಿಗೆ ಅನುಮತಿ ಪಡೆಯಬೇಕೆಂದು ಹೇಳಿದೆ. ಇದು ಹಲವು ಯಕ್ಷಗಾನ ತಂಡಗಳಿಗೆ ತೊಂದರೆಯಾಗಿದೆ ಎನ್ನುತ್ತಾರೆ ಪಟ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.