ಬಿಎಸ್ ವೈ, ರವಿಶಂಕರ್ ಪ್ರಸಾದ್ ಕ್ಷಮೆ ಕೇಳಬೇಕು: ನಟ ಚೇತನ್
ದಿಡ್ಡಳ್ಳಿ ಬುಡಕಟ್ಟು ಜನಾಂಗದವರು ನಕ್ಸಲೀಯರು ಎಂದು ಕರೆದಿರುವ ಕೇಂದ್ರ ಸಚಿವ ರವಿಶಂಕರ್ ....

ಬೆಂಗಳೂರು; ದಿಡ್ಡಳ್ಳಿ ಬುಡಕಟ್ಟು ಜನಾಂಗದವರು ನಕ್ಸಲೀಯರು ಎಂದು ಕರೆದಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಷಮೆ ಕೇಳಬೇಕೆಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಆಗ್ರಹಿಸಿದ್ದಾರೆ.
ಮಡಿಕೇರಿಯಲ್ಲಿರುವ ಈ ಬುಡಗಟ್ಟು ಜನರನ್ನು ತಮ್ಮ ವಾಸಸ್ಥಾನ ಬಿಟ್ಟು ತೆರಳುವಂತೆ 2016ರಲ್ಲಿ ಹೇಳಲಾಗಿತ್ತು. ಅಲ್ಲಿಂದ ನಂತರ ಈ ಬುಡಕಟ್ಟು ಜನಾಂಗದವರು, ಹಲವು ಕಾರ್ಯಕರ್ತರಿಂದ ಇದಕ್ಕೆ ವಿರೋಧ ಕೇಳಿಬರುತ್ತಿದೆ.
ಬಿಜೆಪಿ ಹೊರಡಿಸಿರುವ ಆರೋಪಪಟ್ಟಿಯಲ್ಲಿ ದಿಡ್ಡಳ್ಳಿ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ ನಕ್ಸಲ್ ಪ್ರತಿಭಟನೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಅವರಿಗೆ ದಲಿತರು, ಬುಡಗಟ್ಟು ಜನಾಂಗದವರು ಮತ್ತು ಇತರ ಅಸಂಘಟಿತ ಬಡವರ ಧ್ವನಿ ಕೇಳುವುದಿಲ್ಲ. ಇವರೆಲ್ಲಾ ತಮ್ಮ ಜೀವನೋಪಾಯಕ್ಕೆ ಮಾಡುತ್ತಿರುವ ಹೋರಾಟಗಳು. ಇವರನ್ನು ಕಳಂಕಿತರು ಎಂಬ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಹೀಗಾಗಿ ಬಿಜೆಪಿಯವರು ಇದಕ್ಕೆ ಕ್ಷಮೆ ಕೋರಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಚೇತನ್ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


