ರಾಜ್ಯ

ಶಿವಮೊಗ್ಗ: ಸಪ್ತಪದಿ ತುಳಿಯುತ್ತಿದ್ದ ವಧುವಿನ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ

ವಧು ಸಪ್ತಪದಿ ತುಳಿಯುತ್ತಿದ್ದಾಗಲೇ ಭಗ್ನ ಪ್ರೇಮಿಯೊಬ್ಬ ಆಕೆಯ ಕುತ್ತಿಗೆಗೆ ಕತ್ತಿಯಿಂದ ಇರಿದ ಘಟನೆ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಭೀಮನಕೋಣೆ ಎನ್ನುವಲ್ಲಿ ನಡೆದಿದೆ.

ಶಿವಮೊಗ್ಗ: ಸಪ್ತಪದಿ ತುಳಿಯುತ್ತಿದ್ದ ವಧುವಿನ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ
ಶಿವಮೊಗ್ಗ: ಸಪ್ತಪದಿ ತುಳಿಯುತ್ತಿದ್ದ ವಧುವಿನ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ
Published On :
ಶಿವಮೊಗ್ಗ: ವಧು ಸಪ್ತಪದಿ ತುಳಿಯುತ್ತಿದ್ದಾಗಲೇ ಭಗ್ನ ಪ್ರೇಮಿಯೊಬ್ಬ ಆಕೆಯ ಕುತ್ತಿಗೆಗೆ ಕತ್ತಿಯಿಂದ  ಇರಿದ ಘಟನೆ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಭೀಮನಕೋಣೆ ಎನ್ನುವಲ್ಲಿ ನಡೆದಿದೆ.
ಭೀಮನಕೋಣೆ ಕಾಪ್ಟೆಮನೆಯಲ್ಲಿ ವರನ ಸ್ವಗೃಹದಲ್ಲಿ ಭರತ್ ಹಾಗೂ ಶೋಭಾ(ಹೆಸರು ಬದಲಿಸಲಾಗಿದೆ) ಳ ವಿವಾಹ ನೆರವೇರುತ್ತಿತ್ತು. ವಧುವಿಗೆ ತಾಳಿ ಕಟ್ಟಿದ ಬಳಿಕ ವಧೂ ವರರು ಸಪ್ತಪದಿ ತುಳಿಯುತ್ತಿದ್ದಾಗಲೇ ಭಗ್ನ ಪ್ರೇಮಿಯು ಆಗಮಿಸಿ ವಧುವಿನ ಕುತ್ತಿಗೆಗೆ ಕತ್ತಿಯಿಂದ ಇರಿದಿದ್ದಾನೆ. ಆ ವೇಳೆ ಆತನನ್ನು ತಡೆಯಲು ಮುಂಡಾದ ವಧುವಿನ ಚಿಕ್ಕಪ್ಪ ಗಂಗಾಧರಪ್ಪ ಎನ್ನುವವರ ಮೇಲೆ ಸಹ ಆತ ಹಲ್ಲೆ ನಡೆಸಿದ್ದಾನೆ. ತಕ್ಷಣ ಅಲ್ಲಿ ನೆರೆದವರೆಲ್ಲಾ ಸೇರಿ ಆತನನ್ನು ತಡೆದಿದ್ದಾರೆ. 
ವಧು ಶೋಭಾ ಹಾಗೂ ಗಂಗಾಧರಪ್ಪನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕತ್ತಿಯಿಂದ ಹಲ್ಲೆ ನಡೆಸಿದ್ದ ಯುವಕನನ್ನು ನಂದನ್ ಎಂದು ಗುರುತಿಸಲಾಗಿದ್ದು ಈತ ಶಿವಮೊಗ್ಗದ ನಿವಾಸಿಯಾಗಿದ್ದಾನೆ. ಕಳೆದ ಆರು ತಿಂಗಳಿನಿಂದ ಶೋಭಾಳನ್ನು ಇವನು ಪ್ರೀತಿಸುತ್ತಿದ್ದ  ಎನ್ನಲಾಗಿದೆ, ಶೋಭಾ ಇವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದಕ್ಕಾಗಿ ತನ್ನನ್ನು ಪರಿತ್ಯಜಿಸಿ ಇನ್ನೊಬ್ಬನ ಜತೆ ಮದುವೆಗೆ ಮುಂದಾದವಳನ್ನು ಕೊಲ್ಲಲು ಈತ ಮುಂದಾಗಿದ್ದ.
ಇದೀಗ ಆರೋಪಿ ನಂದನ್ ನನ್ನು ಸ್ಥಳೀಯರು ಪೋಲೀಸರಿಗೆ ಒಪ್ಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.