ರ‍್ಯಾಲಿಯಿಂದ ನದಿಗಳ ಪುನರುಜ್ಜೀವನ ಸಾಧ್ಯವಿಲ್ಲ: ರಾಜೇಂದ್ರ ಸಿಂಗ್
ನದಿಗಳ ಬಗ್ಗೆ ಜ್ಞಾನವಿಲ್ಲದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಯಶಸ್ವಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Published On :
ಚಿತ್ರದುರ್ಗ: ನದಿಗಳ ಪುನರುಜ್ಜೀವನಕ್ಕಾಗಿ ಈಶಾ ಫೌಂಡೇಶನ್ ನ ಸದ್ಗುರು ಜಗದೀಶ್ ವಾಸುದೇವ್ ಅವರು ಪ್ರಾರಂಭಿಸಿರುವ ರ‍್ಯಾಲಿಯ ಬಗ್ಗೆ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ, ಜಲಸಂರಕ್ಷಕ ಡಾ. ರಾಜೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ನದಿಗಳ ಬಗ್ಗೆ ಜ್ಞಾನವಿಲ್ಲದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಯಶಸ್ವಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಣ ಇರುವವರು ಈ ರ‍್ಯಾಲಿಗೆ ಬೆಂಬಲ ಸೂಚಿಸುತ್ತಿದ್ದಾರೆ, ಆದರೆ ಇದರಿಂದ ನದಿಗಳಾ ಪುನರುಜ್ಜೀವನ ಸಾಧ್ಯವಾಗುವುದಿಲ್ಲ. ಒಂದು ವೇಳೆ ನದಿಗಳ ಪುನರುಜ್ಜೀವನದ ಬಗ್ಗೆ ಗಂಭೀರವಾಗಿ ಯೋಚಿಸುವುದಾದರೆ ರಿವರ್ ಕಾಂಗ್ರೆಸ್ ನ್ನು ಹಮ್ಮಿಕೊಳ್ಳಿ 35 ವರ್ಷಗಳ ಹಿಂದೆ ಇದೇ ರೀತಿಯ ಪ್ರಯತ್ನ 8 ನದಿಗಳ ಪುನರುಜ್ಜೀವನಕ್ಕೆ ಸಹಕಾರಿಯಾಗಿತ್ತು ಎಂದು ರಾಜೇಂದ್ರ ಸಿಂಗ್ ಸಲಹೆ ನೀಡಿದ್ದಾರೆ.
ಇದೇ ವೇಳೆ ಸರ್ಕಾರಕ್ಕೆ ನದಿ ಗಣಿಗಾರಿಕೆ ಮಾಡಲು ಸರ್ಕಾರ ಕಡಿವಾಣ ಹಾಕಬೇಕು ಎಂದು ಡಾ.ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸದ್ಗುರು ಜಗ್ಗಿ ವಾಸುದೇವ್Dr Rajendra SinghRally for Rivers movementSadguru Jagdish Vasudevಡಾ.ರಾಜೇಂದ್ರ ಸಿಂಗ್ರ್ಯಾಲಿ ಫಾರ್ ರಿವರ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


