ಚಾಮುಂಡೇಶ್ವರಿಗೆ 31 ಕೆಜಿ ತೂಕದ ಎರಡು ಬೆಳ್ಳಿ ಆನೆ ಸಮರ್ಪಿಸಿದ ಡಿಕೆಶಿ!
ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ 2ನೇ ಬಾರಿಗೆ ಕುಟುಂಬ ಸಮೇತರಾಗಿ ಚಾಮುಂಡೆಶ್ವರಿ ದರ್ಶನ ಪಡೆದರು.

Published On :
ಮೈಸೂರು: ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ 2ನೇ ಬಾರಿಗೆ ಕುಟುಂಬ ಸಮೇತರಾಗಿ ಚಾಮುಂಡೆಶ್ವರಿ ದರ್ಶನ ಪಡೆದರು. ಇದೇ ಸಮಯದಲ್ಲಿ ದೇವಿಗೆ 2 ಬೆಳ್ಳಿ ಆನೆಗಳನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಿದ್ದಾರೆ.
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ 31 ಕೆಜಿ ತೂಕದ 2 ಬೆಳ್ಳಿ ಆನೆಗಳನ್ನು ಸಮರ್ಪಿಸಿದರು. ನಿನ್ನೆ ಡಿಕೆಶಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಅಲ್ಲಿ ತುಲಾಭಾರ ಸೇವೆ ಸಲ್ಲಿಸಿದ್ದರು.
ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಡಿಕೆಶಿ ಸುದ್ದಿಗಾರರ ಜತೆ ಮಾತನಾಡಿ, "ಈ ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ, ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ದೇವಿ ನೆರವೇರಿಸಿದ್ದಾಳೆ" ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
DK Shivakumarಡಿ.ಕೆ. ಶಿವಕುಮಾರ್ಐಟಿ ದಾಳಿIT ridesilver elephantDevi Chamundeshwariಬೆಳ್ಳಿ ಆನೆದೇವಿ ಚಾಮುಂಡೇಶ್ವರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


