ರಾಜ್ಯ

ಸಚಿವ ಎಚ್.ಆಂಜನೇಯಗೆ ಬಹಿರಂಗ ಸವಾಲು ಹಾಕಿದ ಚಿತ್ರದುರ್ಗ ಬಾಲಕಿ

ಸರ್ಕಾರಿ ಶಾಲೆಗಳಲ್ಲಿ ಮೊದಲು ಸೂಕ್ತ ಸೌಲಭ್ಯ ಒದಗಿಸಿ, ನಂತರ ನಾನೂ ಸರ್ಕಾರಿ ಶಾಲೆ ಸೇರುತ್ತೇನೆ ಎಂದು ಚಿತ್ರದುರ್ಗದ....

ಸಚಿವ ಎಚ್.ಆಂಜನೇಯಗೆ ಬಹಿರಂಗ ಸವಾಲು ಹಾಕಿದ ಚಿತ್ರದುರ್ಗ ಬಾಲಕಿ
ನಯನಾ ಜೋಗಿ - ಎಚ್ ಆಂಜನೇಯ
Published On :
ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಮೊದಲು ಸೂಕ್ತ ಸೌಲಭ್ಯ ಒದಗಿಸಿ, ನಂತರ ನಾನೂ ಸರ್ಕಾರಿ ಶಾಲೆ ಸೇರುತ್ತೇನೆ ಎಂದು ಚಿತ್ರದುರ್ಗದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲ ಉಸ್ತುವಾರಿ ಸಚಿವ ಎಚ್ ಆಂಜನೇಯ ಅವರಿಗೆ ಬಹಿರಂಗ ಸವಾಲು ಹಾಕಿದ ಘಟನೆ ಶುಕ್ರವಾರ ನಡೆದಿದೆ.
'ಸಚಿವರು ಸರ್ಕಾರಿ ಶಾಲೆಗಳನ್ನು ಉಳಿಸಿ ಅಂತ ಭಾಷಣ ಮಾಡಿದರೆ ಸಾಲದು. ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಂತೆ ಮೂಲ ಸೌಲಭ್ಯ ಕಲ್ಪಿಸಿ, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಕ್ಕಳನ್ನು ಆ ಶಾಲೆಗೆ ಸೇರಿಸಿದರೆ, ನಾನು ಕೂಡ ಅಲ್ಲಿಗೆ ಸೇರುತ್ತೇನೆ....’ ಹೀಗೆ ಕಡ್ಡಿ ಮುರಿದಂತೆ ಮಾತನಾಡಿ, ಸಚಿವ ಎಚ್. ಆಂಜನೇಯ ಅವರಿಗೆ ಸವಾಲು ಹಾಕಿದ ವಿದ್ಯಾರ್ಥಿನಿ ಹೆಸರು ನಯನಾ ಜೋಗಿ. ಈಕೆ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ.
ಸಚಿವ ಆಂಜನೇಯ ಅವರು ಜಿಲ್ಲಾ ಮಟ್ಟದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ದಲ್ಲಿ ಸರ್ಕಾರಿ ಶಾಲೆ ಉಳಿಸಬೇಕು’ ಎಂದು ಹೇಳಿಕೆ ನೀಡಿ ವೇದಿಕೆಯಿಂದ ಕೆಳಗಿಳಿಯುತ್ತಿರುವಾಗ, ಅವರನ್ನು ತಡೆದು ನಿಲ್ಲಿಸಿದ ನಯನಾ, ಈ ರೀತಿ ಸವಾಲು ಹಾಕಿದಳು.
‘ನನಗೂ ಸರ್ಕಾರಿ ಶಾಲೆಗೆ ಸೇರಲು ಇಷ್ಟ. ಆದರೆ, ಅಲ್ಲಿ ಸೌಲಭ್ಯಗಳಿಲ್ಲ. ಸರ್ಕಾರಿ ಶಾಲೆಗೆ ಉತ್ತಮ ಸೌಲಭ್ಯ ಕೊಡಿಸಿ. ನಾನು ಮಾತ್ರವಲ್ಲ, ನನ್ನ ಮೂವತ್ತು ಸ್ನೇಹಿತೆಯರ ಜತೆಗೂಡಿ ಸರ್ಕಾರಿ ಶಾಲೆಗೆ ಸೇರುತ್ತೇವೆ’ ಎಂದು ಹೇಳಿದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.