ರಾಜ್ಯ

ಜಾಮೀನಿನ ನಂತರ ಅತ್ಯಾಚಾರ ಆರೋಪಿ ರೋಡ್ ಶೋ: ಮತ್ತೆ ಕಂಬಿ ಹಿಂದೆ ತಳ್ಳಿದ ಧಾರವಾಡ ಪೊಲೀಸ್!

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಜಾಮೀನು ಪಡೆದ ನಂತರ ರೋಡ್ ಶೋ ನಡೆಸಿ ಮತ್ತೆ ಪೊಲೀಸರ ಅತಿಥಿಯಾಗಿರುವ ಘಟನೆ ...

ಜಾಮೀನಿನ  ನಂತರ ಅತ್ಯಾಚಾರ ಆರೋಪಿ ರೋಡ್ ಶೋ: ಮತ್ತೆ ಕಂಬಿ ಹಿಂದೆ ತಳ್ಳಿದ ಧಾರವಾಡ ಪೊಲೀಸ್!
ರೋಡ್ ಶೋ ನಲ್ಲಿ ಪಾಲ್ಗೊಂಡಿರುವ ಅತ್ಯಾಚಾರ ಆರೋಪಿ
Published On :
ಧಾರವಾಡ: ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಜಾಮೀನು ಪಡೆದ ನಂತರ ರೋಡ್ ಶೋ ನಡೆಸಿ ಮತ್ತೆ ಪೊಲೀಸರ ಅತಿಥಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಅತ್ಯಾಚಾರ, ಎರಡು ಕೊಲೆ, ಮತ್ತು ಕಿಡ್ನಾಪ್ ಪ್ರಕರಣದಡಿ ಜೈಲು ಸೇರಿದ್ದ ಉದ್ಯಿಮಿ ಮಕ್ತುಂ ಸೊಗಲದ್ ಗೆ ಜಾಮೀನು ಸಿಕ್ಕಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಆತನ ಬೆಂಬಲಿಗರೊಂದಿಗೆ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮಕ್ತುಂಸಾಬ್ ಸೊಗಲದ ಅತ್ಯಾಚಾರ ಪ್ರಕರಣವೊಂದರಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. ನ್ಯಾಯಾಲಯ ಅವರನ್ನು ನಿನ್ನೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಆದರೆ, ಅವರ ಬೆಂಬಲಿಗರು ಮಕ್ತುಂಸಾಬ್ ಅವರನ್ನು ಓಪನ್ ರೋಡ್ ಶೋ ಮಾಡುವ ಮೂಲಕ ಮನೆಗೆ ಕರೆತಂದ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಮಕ್ತುಂಸಾಬ್‌ನ ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಿ ಮತ್ತೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಇನ್ನೂ ರೋಡ್ ಶೋಗೆ ಆತನ ಬೆಂಬಲಿಗರು ಪೊಲೀಸರ ಅನುಮತಿ ಪಡೆದಿರಲಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂಎಂ ನಾಗರಾಜ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಆರೋಪಿ ಜೆಡಿಎಸ್ ಸೇರಿದ್ದ.  ಆದರೆ ಆತನ ಬಂಧನದ ನಂತರ ಪಕ್ಷದಿಂದ ಆತನನ್ನು ಉಚ್ಛಾಟನೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.