ಬಿದರಿ ಜೊತೆ ಸಿದ್ದಗಂಗಾ ಮಠಕ್ಕೆ ಎಂಬಿ ಪಾಟೀಲ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ಸಚಿವ
ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ ಪಾಟೀಲ್, ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮಿಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರನ್ನು...

Published On :
ತುಮಕೂರು: ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ ಪಾಟೀಲ್, ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮಿಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಸಚಿವರ ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಕೂಡ ಹಾಜರಿದ್ದರು. 1980 ರಲ್ಲಿ ಮಠದಲ್ಲಿ ಶಿವಕುಮಾರ ಸ್ವಾಮಿಜಿ ಮತ್ತು ದಿವಂಗತ ಗೌರಿ ಶಂಕರ ಸ್ವಾಮೀಜಿ ನಡುವಿನ ಭಿನ್ನಾಭಿಪ್ರಾಯದ ವೇಳೆ ಶಂಕರ್ ಬಿದರಿ ಪ್ರಮುಖ ಪಾತ್ರ ವಹಿಸಿದ್ದರು.
ತಮ್ಮ ಖಾಸಗಿ ಕಾರಿನಲ್ಲಿ ಮಠಕ್ಕೆ ಆಗಮಿಸಿದ ಪಾಟೀಲ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು, ನಂತರ ಮಾತನಾಡಿದ ಅವರು ಶಿವಕುಮಾರ ಸ್ವಾಮೀಜಿ ನಮ್ಮ ದೇವರು, ಅವರು ಆಧುನಿಕ ಬಸವಣ್ಣ, ಅವರ ಆದೇಶದಂತೆ ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ,
ಇನ್ನೂ ಎಸ್ ಐ ಟಿ ಕಾಲೇಜಿನ ಸಿಬ್ಬಂದಿ ಶಿನಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Shivakumara SwamijiSiddaganga MuttM B PatilLingaytth communityಶಿವಕುಮಾರ್ ಸಿದ್ದಗಂಗ ಮಠಎಂ.ಬಿ ಪಾಟೀಲಆಂತರಿಕ ಬಿನ್ನಮತ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


