ಗೌರಿ ಲಂಕೇಶ್ ಹತ್ಯೆ ಕೇಸ್: ವಿಜಯಪುರ ಜೈಲಿನಲ್ಲಿ ಕೈದಿಗಳ ವಿಚಾರಣೆ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ, ವಿಶೇಷ ತನಿಖಾ ತಂಡದ ಅಧಿಕಾರಿಗಳು, ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ...

Published On :
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ, ವಿಶೇಷ ತನಿಖಾ ತಂಡದ ಅಧಿಕಾರಿಗಳು,ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ವಿಚಾರಣೆ ನಡೆಸಿದ್ದಾರೆ.
ವಿಜಯಪುರ ಮತ್ತು ಕಲಬುರಗಿಯಲ್ಲಿರುವ ಆಳಂದ ಉಪ ಕಾರಾಗೃಹಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿತವಾಗಿರುವ ಕೈದಿಗಳ ವಿಚಾರಣೆ ನಡೆಸಿದರು ಎಂದು ಪೊಲೀಸ್ ಮೂಲಗಳಉ ತಿಳಿಸಿವೆ.
ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ತಯಾರಿಕೆ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ. ರೌಡಿ ಶೀಟರ್ ಹೆಬ್ಬೆಟ್ಟು ಮಂಜ ಮತ್ತು ಸೀನ ಸಹಚರರನ್ನು ವಿಜಯಪುರ ಜೈಲಿನಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ಗೌರಿ ಹತ್ಯೆಗೆ ಕೆಲ ರೌಡಿ ಶೀಟರ್ ಗಳು ಶಸ್ತ್ರ ಪೂರೈಸಿರುವ ಶಂಕೆ ವ್ಯಕ್ತವಾಗಿದೆ, ದೇಶೀಯವಾಗಿ ನಿರ್ಮಿತವಾಗಿರುವ ಗನ್ ಬಳಸಲಾಗಿದ್ದು, ಹಲವು ಕೈದಿಗಳ ವಿಚಾರಣೆ ನಡೆಸಿದ ಅಧಿಕಾರಿಗಳು ತುರ್ತಾಗಿ ಅಲ್ಲಿಂದ ತೆರಳಿದರು. ಜೊತೆಗೆ ಇನ್ನೂ ಹಲವು ಜೈಲುಗಳಿಗೆ ಭೇಟಿ ನೀಡಿ ಅಧಿಕಾರಿಗಳ ತಂಡ ಎಂ ಎಂ ಕಲಬುರ್ಗಿ ಮತ್ತು ಗೌರಿ ಹತ್ಯೆಗೆ ಒಂದೇ ಮಾದರಿಯ ಪಿಸ್ತೂಲ್ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಶಸ್ತ್ರಸ್ತ್ರ ಕಾಯ್ದೆಯಡಿ ಬಂಧಿತರಾಗಿರುವ ಅತಿ ಹೆಚ್ಚು ಮಂದಿ ಕೈದಿಗಳು ವಿಜಯಪುರ ಜೈಲಿನಲ್ಲಿದ್ದಾರೆ, ಪ್ರತಿ ವರ್ಷ ಸುಮಾರು 20ರಿಂದ 30 ಕೇಸುಗಳು ದಾಖಲಾಗುತ್ತವೆ. ಪೊಲೀಸರು ಕೆಲ ಸುಧಾರಿತ ನಕ್ಸಲ್ ನಾಯಕರನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SITInmatesquestionedಎಸ್ ಐಟಿಕೈದಿಗಳುGauri Lankesh CaseVijayapura Central prisonಗೌರಿ ಲಂಕೇಶ್ ಕೇಸ್ವಿಜಯಪುರ ಕೇಂದ್ರ ಕಾರಾಗೃಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


