ರಾಜ್ಯ

ಜ್ಞಾನ ಭಾರತಿ ಪ್ರವೇಶ ದ್ವಾರ ಬಂದ್ ; ಪ್ರಯಾಣಿಕರಿಗೆ ಕಿರಿಕಿರಿ

ಇದೇ ಶನಿವಾರ ಕೆಂಪೇಗೌಡ ಜಯಂತಿ ಆಚರಣೆಯಿರುವುದರಿಂದ ಮೈಸೂರು ರಸ್ತೆಯಿಂದ....

ಜ್ಞಾನ ಭಾರತಿ ಪ್ರವೇಶ ದ್ವಾರ ಬಂದ್ ; ಪ್ರಯಾಣಿಕರಿಗೆ ಕಿರಿಕಿರಿ
ಕೆಂಪೇಗೌಡ ಜಯಂತಿ ಆಚರಣೆ ಪ್ರಯುಕ್ತ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡ ವೇದಿಕೆ
Published On :
ಬೆಂಗಳೂರು: ಇದೇ ಶನಿವಾರ ಕೆಂಪೇಗೌಡ ಜಯಂತಿ ಆಚರಣೆಯಿರುವುದರಿಂದ ಮೈಸೂರು ರಸ್ತೆಯಿಂದ ಮಲ್ಲತಹಳ್ಳಿಗೆ ಸಂಪರ್ಕಿಸುವ ಜ್ಞಾನಭಾರತಿ ಕ್ಯಾಂಪಸ್ ನ  ಒಂದು ಕಡೆಯ ಪ್ರವೇಶವನ್ನು  ಬೆಂಗಳೂರು ವಿಶ್ವವಿದ್ಯಾಲಯ ಕೆಲ ದಿನಗಳ ಮಟ್ಟಿಗೆ ಮುಚ್ಚಿದೆ. ಈ ಮಾರ್ಗದ ಮೂಲಕ ನಿತ್ಯ ಹೋಗುತ್ತಿದ್ದ ಪ್ರಯಾಣಿಕರಿಗೆ ಇದರಿಂದ ಅನನುಕೂಲವಾಗಿದೆ. ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕೆಂಪೇಗೌಡ ಅಧ್ಯಯನ ಕೇಂದ್ರ ಇದೇ ಶನಿವಾರ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಲ್ಲಿ ಸುಮಾರು 6,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಜೆಬಿ ಪೊಲೀಸ್ ಠಾಣೆಯ ಹತ್ತಿರ ಜ್ಞಾನ ಭಾರತಿ ಕ್ಯಾಂಪಸ್ ನ ಮಾರ್ಗ ಮಧ್ಯೆ ಕಾರ್ಯಕ್ರಮದ ವೇದಿಕೆ ನಿರ್ಮಿಸಲಿದ್ದಾರೆ. ಇದಕ್ಕಾಗಿ ಈ ಮಾರ್ಗವನ್ನು ಮುಚ್ಚಲಾಗಿದೆ.
ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು, ಅಷ್ಟು ದೊಡ್ಡ ವೇದಿಕೆ ನಿರ್ಮಿಸಲು ನಮಗೆ ಕನಿಷ್ಟವೆಂದರೂ 2 ದಿನಗಳು ಬೇಕು. ಹೀಗಾಗಿ ನಾವು ರಸ್ತೆಯ ಪ್ರವೇಶವನ್ನು ಮುಚ್ಚಿದ್ದೇವೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.