ಕಲಬುರಗಿ: ಭೀಮಾ ನದಿ ತೀರದಲ್ಲಿ ಪ್ರವಾಹದ ಎಚ್ಚರಿಕೆ
ಮಹಾರಾಷ್ಟ್ರದ ಉಜನಿ ಜಲಾಶಯ ಸುತ್ತಮುತ್ತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಭೀಮಾನದಿ ದಡದಲ್ಲಿರುವ ಅಫ್ಜಲಪುರ ಮತ್ತು ಜೇವರ್ಗಿ ..

Published On :
ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯ ಸುತ್ತಮುತ್ತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಭೀಮಾನದಿ ದಡದಲ್ಲಿರುವ ಅಫ್ಜಲಪುರ ಮತ್ತು ಜೇವರ್ಗಿ ತಾಲೂಕುಗಳ ಗ್ರಾಮದ ಜನತೆಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಉಜನಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವ ಕಾರಣ, ಹಾಗೂ ಅದೇ ಪ್ರಮಾಣದ ನೀರು ಭೀಮಾ ನದಿಯಿಂದ ಸೊಣ್ಣ ಜಲಾಶಯಕ್ಕೆ ಹರಿಸಿರುವ ಕಾರಣ ಒಳಹರಿವು ಹೆಚ್ಚಿದೆ ಎಂದು ಸೊಣ್ಣ ನೀರಾವರಿ ಯೋಜನೆ ಕಾರ್ಯಕಾರಿ ಎಂಜಿನೀಯರ್ ಹೇಳಿದ್ದಾರೆ.
ಸದ್ಯ, ಸೊಣ್ಣ ಜಲಾಶಯದಲ್ಲಿ 405.75 ಅಡಿ ನೀರು ಸಂಗ್ರಹವಾಗಿದೆ, ಆದರೆ ಜಲಾಶಯ 406.40 ಅಡಿ ಎತ್ತರವಿದೆ.
ಹೀಗಾಗಿ ಭೀಮಾ ನದಿ ತೀರದಲ್ಲಿರುವ ಜೇವರ್ಗಿ ಮತ್ತು ಅಫ್ಜಲಪುರ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸ್ವಿಮ್ಮಿಂಗ್ ಮತ್ತು ಬಟ್ಟೆ ಜಾನುವಾರು ತೊಳೆಯಲು ತೆರಳದಂತೆ ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


