ಮನೆಬಿಟ್ಟು ಹೋಗಿದ್ದ ರಾಜ್ಯ ಸಚಿವರ ಸಂಬಂಧಿ ಬಾಲಕ ಹೈದರಾಬಾದ್ ನಲ್ಲಿ ಪತ್ತೆ
ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದ ಬೀದರ್ ಜಿಲ್ಲೆಯ ಸಚಿವರೊಬ್ಬರ ಸೋದರ ಸಂಬಂಧಿ ಬಾಲಕ ಹೈದರಾಬಾದ್ ನಲ್ಲಿ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ...

Published On :
ಹೈದರಾಬಾದ್: ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದ ಬೀದರ್ ಜಿಲ್ಲೆಯ ಸಚಿವರೊಬ್ಬರ ಸೋದರ ಸಂಬಂಧಿ ಬಾಲಕ ಹೈದರಾಬಾದ್ ನಲ್ಲಿ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ಪತ್ತೆಯಾಗಿದ್ದಾನೆ.
ಶುಕ್ರವಾರ ಹೈದರಾಬಾದ್ ಪೊಲೀಸರು ಮೂವರು ಬಾಲಕರನ್ನು ರಕ್ಷಿಸಿದ್ದಾರೆ. ನಗರಕ್ಕೆ ಬಂದ ಬಾಲಕರು ಚಾರ್ ಮಿನಾರ್ ವೀಕ್ಷಿಸಿ,ಸೆಪ್ಟಂಬರ್ 5 ರಂದು ನಡೆಯಲಿರುವ ಗಣೇಶ್ ವಿಸರ್ಜನೆ ಕಾರ್ಯಕ್ರಮ ನೋಡಲು ಕಾಯುತ್ತಿದ್ದರು. ಗುರುವಾರ ರಾತ್ರಿ ಈ ಮೂವರು ಬಾಲಕರು ಮನೆ ಬಿಟ್ಟು ಬಂದಿದ್ದರು.
ಮನೆ ಬಿಟ್ಟ ಮೂವರು ಬಾಲಕರು ರೈಲು ಹತ್ತಿಕೊಂಡು ನಗರಕ್ಕೆ ಆಗಮಿಸಿದ್ದರು, ನಗರ ಸುತ್ತಿದ ಅವರು ಸುಲ್ತಾನ್ ಬಜಾರ್ ನಲ್ಲಿರುವ ಗಣೇಶ್ ಪೆಂಡಾಲ್ ಹತ್ತಿರ ಬಂದಿದ್ದಾರೆ, ಅಲ್ಲಿ ಗಣೇಶ ಕೂರಿಸಿದ್ದ ಆಯೋಜಕರು ಶುಕ್ರವಾರ ಬೆಳಗ್ಗೆ ಮೂವರನ್ನು ವಿಚಾರಿಸಿದ್ದಾರೆ, ಒಂದು ಗಂಟೆಯ ಬಳಿಕ ಗಸ್ತಿನಲ್ಲಿದ್ದ ಪೊಲೀಸರು ಆ ಸ್ಥಳಕ್ಕೆ ತೆರಳಿದರು, ಈ ವೇಳೆ ತೆಲುಗು ಬಾರದ ಬಾಲಕರು ಉತ್ತರ ನೀಡಲು ತಡವರಿಸುತ್ತಿದ್ದರು ಎಂದು ಸುಲ್ತಾನ್ ಬಜಾರ್ ಇನ್ಸ್ ಪೆಕ್ಟರ್ ಪಿ. ಶಿವಶಂಕರ್ ಹೇಳಿದ್ದಾರೆ.
ಅವರು ಬೀದರ್ ನಿಂದ ಮನೆ ಬಿಟ್ಟು ಬಂದವರೆಂದು ನಂತರ ಪೊಲೀಸರಿಗೆ ತಿಳಿದು ಬಂದಿದೆ, ಬೀದರ್ ಪೊಲೀಸರಿಗೆ ಈ ಸಂಬಂಧ ವಿಷಯ ಮುಟ್ಟಿಸಿದಾಗ ನಾಪತ್ತೆ ಪ್ರಕರಣ ದಾಖಲಾಗಿರುವುದರ ಬಗ್ಗೆ ವಿವರಿಸಿದ್ದಾರೆ, ನಂತರ ಬಾಲಕ ಬೀದರ್ ಸತಚಿ ಈಶ್ವರ್ ಭೀಮಣ್ಣ ಖಂಡ್ರೆ ಅವರ ಸೋದರಳಿಯ ಎಂಬುದಾಗಿ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


