ವಿಜಯಪುರ: ಪೋಲೀಸ್ ಮತ್ತು ರೌಡಿಗಳ ನಡುವೆ ಗುಂಡಿನ ಕಾಳಗ, ರೌಡಿ ಸಾವು, ಪಿಎಸ್ಐ ಸ್ಥಿತಿ ಗಂಭೀರ
ಭೀಮಾತೀರದಲ್ಲಿ ಪೊಲೀಸ್ ಮತ್ತು ರೌಡಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

Published On :
ವಿಜಯಪುರ: ಭೀಮಾತೀರದಲ್ಲಿ ಪೊಲೀಸ್ ಮತ್ತು ರೌಡಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದಲ್ಲಿ ಲೀಸ್ ಹಾಗೂ ಭೀಮಾತೀರದ ಹಂತಕರ ನಡುವೆ ಗುಂಡಿನ ಚಕಮಕಿ ನಡೆಯಿತು.
ಕುಖ್ಯಾತ ರೌಡಿ ಧರ್ಮರಾಜ ಚಡಚಣ ಹಾಗೂ ಬೆಂಬಲಿಗರಿಂದ ಪಿಎಸ್ಐ ಗೋಪಾಲ ಹಳ್ಳೂರು ಎನ್ನುವವರ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಗೊಲಗಾದ ಪಿಎಸ್ಐ ಅವರಿಗೆ ಗುಂಡು ತಗುಲಿದ್ದು ಗಂಭೀರ ಗಾಯಗೊಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಕಾಳಗದಲ್ಲಿ ಭಾಗಿಯಾಗಿದ್ದ ರೌಡಿ ಧರ್ಮರಾಜ ಚಡಚಣ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧರ್ಮರಾಜನ ಮನೆ ಮೇಲೆ ದಾಳಿ ಮಾಡಲು ಹೋಗಿದ್ದ ಪಿ.ಎಸ್.ಐ. ಗೋಪಾಲ ಹಳ್ಳೂರ ಮತ್ತು ತಂಡದ ತೆರಳಿತ್ತು ಎನ್ನಲಾಗಿದ್ದು ಈ ವೇಳೆ ಗುಂಡಿನ ಕಾಳಗ ನಡೆದಿದೆ. ಸ್ಥಳಕ್ಕೆ ಎಸ್ ಪಿ ಕುಲದೀಪ ಜೈನ್ ಹಾಗೂ ಎಎಸ್ ಪಿ ಶಿವಕುಮಾರ ಗುಣಾರಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪುತ್ರಪ್ಪ ಹಾಗೂ ಫಯಾಜ್ ಮುಫ್ತಿಫ್ ಎನ್ನುವರ ಕೊಲೆಯಲ್ಲಿ ಭಾಗಿಯಾಗಿದ್ದ ಧರ್ಮರಾಜ್, ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
firingBijapurವಿಜಯಪುರಫೈರಿಂಗ್Circle InspectorBhima river assailantDharmaraj Chadachanaಸರ್ಕಲ್ ಇನ್ಸ್ಪೆಕ್ಟರ್ಭೀಮಾ ನದಿ ದಾಳಿಕೋರಧರ್ಮರಾಜ್ ಚಡಚಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


