ಬೆಂಗಳೂರು: ನಗರದ ಬಡವರಿಗೆ ಒಂದು ಲಕ್ಷ ವಸತಿ ನಿರ್ಮಾಣ, ಸಿದ್ದರಾಮಯ್ಯ ಘೋಷಣೆ
ಬೆಂಗಳೂರಿನ ಬಡವರಿಗೆ ಮನೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಲಿದ್ದಾರೆ. ಬಡ ಬಡವರಿಗೆ ಒಂದು ಲಕ್ಷ ಮನೆಗಳ........

Published On :
ಬೆಂಗಳೂರು: ಬೆಂಗಳೂರಿನ ಬಡವರಿಗೆ ಮನೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಲಿದ್ದಾರೆ. ಬಡ ಬಡವರಿಗೆ ಒಂದು ಲಕ್ಷ ಮನೆಗಳ ವಿತರಣೆಗಾಗಿ ನ.15 ರಿಂದ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.
‘ಮುಖ್ಯಮಂತ್ರಿ ಗಳ ಒಂದು ಲಕ್ಷ ವಸತಿ ಯೋಜನೆ’ ಜಾರಿಯ ಬಗೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾದ್ಯಮದವರೊಡನೆ ಮಾತನಾಡಿದ ಸಿದ್ದರಾಮಯ್ಯ "ಸ್ವಂತ ಮನೆ ಇಲ್ಲದ ಬಡವರಿಗೆ ವಸತಿ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಸಾಲಿನ ಬಜೆಟ್ ನಲ್ಲಿಯೇ ಈ ಯೋಜನೆ ಘೋಷಣೆಯಾಗಿತ್ತು. ಸೆ.29ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪ್ರಾರಭವಾಗಲಿದೆ. ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಲಾಗುತ್ತದೆ. 18ರಿಂದ 24 ತಿಂಗಳೊಳಗೆ ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕೆಂದು ಗುರಿ ಹಾಕಿಕೊಂಡಿದ್ದೇವೆ." ಎಂದು ವಿವರಿಸಿದರು.
ನೆಲಮಹಡಿಯಿಂದ ಮೂರಂತಸ್ತಿನ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇತ್ತೀಚೆಗೆ ಸರ್ಕಾರಿ ಭೂಮಿ ಅತಿಕ್ರಮಣದಿಂದ ತೆರವುಗೊಳಿಸಲಾದ ಜಾಗಗಳಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂಡು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈಗಾಗಲೇ 431 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದೆ. ಪ್ರತಿ ಮನೆಯ ನಿರ್ಮಾಣದ ಅಂದಾಜು ವೆಚ್ಚವು 5.50 ಲಕ್ಷವಾಗಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರವು ಎಸ್ಸಿ ಎಸ್ಟಿ ಫಲಾನುಭವಿಗಳಿಗೆ 3.80 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದ ಬಿಪಿಎಲ್ ಕುಟುಂಬಗಳಿಗೆ 2.70 ಲಕ್ಷ ರೂ. ಧನಸಹಾಯ ಒದಗಿಸಲಿದೆ. ಉಳಿದ ಖರ್ಚನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.
ಎಸ್ಸಿ ಎಸ್ಟಿ ಪಲಾನುಭವಿಗಳಿಗೆ ಅರ್ಜಿಯೊಡನೆ ಆರಂಭಿಕ ಠೇವಣಿಯಾಗಿ 50,000 ರೂ. ಮತ್ತು ಉಳಿದ ಸಾಮಾನ್ಯ ವರ್ಗಕ್ಕೆ 1 ಲಕ್ಷ ರೂ. ಸಂಗ್ರಹಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಸತಿ ಯೋಜನೆ ಫಲಾನುಭವಿಯಾಗಲು ಈ ಕೆಳಗಿನ ಅರ್ಹತೆಗಳು ಇರಬೇಕು-
ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರಬೇಕು
ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು
ಸ್ವಂತ ಮನೆ ಅಥವಾ ನಿವೇಶನ ಹೊಂದಿರಬಾರದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BengaluruChief minister siddaramaiahಮುಖ್ಯಮಂತ್ರಿ ಸಿದ್ದರಾಮಯ್ಯone lakh houses for the poorRajiv Gandhi Housing Corporationಬಡ ಜನರಿಗೆ ಒಂದು ಲಕ್ಷ ಮನೆರಾಜೀವ್ ಗಾಂಧಿ ವಸತಿ ನಿಗಮಬೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


