ಮೆಟ್ರೊ ರೈಲು ಒಂದು ನಿಮಿಷ ತಡವಾಗಿತ್ತು: ಅಧಿಕಾರಿಗಳು
ಮೊನ್ನೆ ಸೋಮವಾರ ಅಪರಾಹ್ನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ರೈಲು ಹೊರಡುವ ವೇಳೆ ಬಾಗಿಲು ಹಾಕುವಾಗ ಕೆಲವು ಪ್ರಯಾಣಿಕರು....

Published On :
ಬೆಂಗಳೂರು: ಮೊನ್ನೆ ಸೋಮವಾರ ಅಪರಾಹ್ನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ರೈಲು ಹೊರಡುವ ವೇಳೆ ಬಾಗಿಲು ಹಾಕುವಾಗ ಕೆಲವು ಪ್ರಯಾಣಿಕರು ಗಾಯಗೊಂಡ ಘಟನೆಗೆ ಚಾಲಕ ಕಾರಣ ಎಂದು ಗಾಯಗೊಂಡವರಲ್ಲೊಬ್ಬರಾದ ರಾಜೀವ್ ಗೌಡ ಹೇಳುತ್ತಾರೆ. ಆದರೆ ಘಟನೆಗೆ ಸಂಬಂಧಪಟ್ಟಂತೆ ಇದುವರೆಗೆ ಯಾರ ಮೇಲೂ ಕೇಸು ದಾಖಲಾಗಿಲ್ಲ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಅಂದು ಕೆಂಪೇಗೌಡ ನಿಲ್ದಾಣದಲ್ಲಿ ರೈಲು ಒಂದು ನಿಮಿಷ ತಡವಾಗಿ ಹೊರಟಿತ್ತು. ರೈಲನ್ನು ಬೇಗ ಚಲಾಯಿಸಿ ಸಮಯವನ್ನು ಹೊಂದಿಸುವ ಯೋಜನೆಯಲ್ಲಿ ರೈಲಿನ ನಿರ್ವಾಹಕರಿದ್ದಿರಬಹುದು ಎಂದು ಮೆಟ್ರೊದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಪ್ರತಿ ನಿಲ್ದಾಣದಲ್ಲಿ ಭದ್ರತೆಗಾಗಿ ಭದ್ರತಾ ಪಡೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನೌಕರರ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸುತ್ತಾರೆ.
ಪ್ರತಿ ನಿಲ್ದಾಣದಲ್ಲಿ ಮೂರು ಬೋಗಿಗಳಿಗೆ ಮೂರು ಭದ್ರತಾ ಪಡೆ ಸಿಬ್ಬಂದಿ ಬದಲಿಗೆ ಕಳೆದ ವಾರ ಇಬ್ಬರು ಭದ್ರತಾ ಪಡೆಗಳಿಗೆ ಇಳಿಕೆ ಮಾಡಲಾಗಿದೆ. ಗೃಹ ಪಡೆಯಿಂದ ನಿಯೋಜನೆಗೊಂಡ ಭದ್ರತಾ ಪಡೆಗಳಿಗೆ ಸೂಕ್ತ ತರಬೇತಿ ಕೂಡ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


