ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ರಾಜುದೊರೆ ಬಂಧನ
ಬೆಂಗಳೂರಿನ ಸೋಲದೇವನಹಳ್ಳಿ ಆಚಾರ್ಯ ಕಾಲೇಜ್ ಬಳಿ ಇಂದು ಬೆಳಗ್ಗೆ ಕುಖ್ಯಾತ ರೌಡಿ ಶೀಟರ್ ರಾಜುದೊರೆ ಯನ್ನು ಪೋಲೀಸರು ಬಂಧಿಸಿದ್ದಾರೆ.

Published On :
ಬೆಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿ ಆಚಾರ್ಯ ಕಾಲೇಜ್ ಬಳಿ ಇಂದು ಬೆಳಗ್ಗೆ ಕುಖ್ಯಾತ ರೌಡಿ ಶೀಟರ್ ರಾಜುದೊರೆ ಯನ್ನು ಪೋಲೀಸರು ಬಂಧಿಸಿದ್ದಾರೆ.
ಇದಕ್ಕೂ ಮುನ್ನ ರಾಜುದೊರೆ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಮುಖ್ಯ ಪೇದೆ ನರಸಿಂಹಮೂರ್ತಿ ಎನ್ನುವವರಿಗೆ ಡ್ರ್ಯಾಗರ್‌ನಿಂದ ಇರಿದಿದ್ದಾನೆ. ಈ ಸಮಯದಲ್ಲಿ ಆತ್ಮರಕ್ಷಣೆಗೆ ಇನ್ಸ್‌ಪೆಕ್ಟರ್ ಪ್ರಕಾಶ್ ರಾಥೋಡ್ ಫೈರಿಂಗ್ ನಡೆಸಿದರು.ರಾಜುದೊರೆಯ ಎಡಗಾಲಿಗೆ ಗುಂಡು ತಗುಲಿದೆ.
ಗುಂಡೇಟು ತಿಂದ ರಾಜುದೊರೆಯನ್ನು ವಶಕ್ಕೆ ಪಡೆದ ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಮುಖ್ಯ ಪೇದೆ ನರಸಿಂಹ ಮೂರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ರೌಡಿಶೀಟರ್ ಪಳನಿಯ ಸಹಚರನಾಗಿದ್ದ ರಾಜದೊರೆ 18 ಪ್ರಕರಣಗಳಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರು ಪೊಲೀಸ್Bengaluru policeಸೋಲದೇವನಹಳ್ಳಿrowdy sheeter RajdhororeSoldavanahalliAcharya Collegeರೌಡಿ ಶೀಟರ್ ರಾಜುದೊರೆಆಚಾರ್ಯ ಕಾಲೇಜು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


