ರಾಜ್ಯ

ಸಿಡಿಲಿನ ಆಘಾತಕ್ಕೆ ರಾಜ್ಯದಲ್ಲಿ 75 ಬಲಿ

ಬರಗಾಲದ ಬವಣೆ ಬಳಿಕ ಸುರಿದ ಮಳೆ ರಾಜ್ಯದ ಜನರಲ್ಲಿ ನಿಜಕ್ಕೂ ಸಂತಸ ತಂದಿದೆ. ಆದಾಗ್ಯೂ, ಈ ಮಳೆಯೇ ಹಲವರ ಜೀವಹಾನಿಗೂ ಕಾರಣವಾಗಿರುವುದು ವಿಪರ್ಯಾಸ.

ಸಿಡಿಲಿನ ಆಘಾತಕ್ಕೆ ರಾಜ್ಯದಲ್ಲಿ 75 ಬಲಿ
ಕರ್ನಾಟಕದಲ್ಲಿ ಏಳು ವರ್ಷಗಳಲ್ಲಿ ಸಿಡಿಲಿನಿಂದಾಗಿ 700 ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ
Published On :
ಬೆಂಗಳೂರು: ಬರಗಾಲದ ಬವಣೆ ಬಳಿಕ ಸುರಿದ ಮಳೆ ರಾಜ್ಯದ ಜನರಲ್ಲಿ ನಿಜಕ್ಕೂ ಸಂತಸ ತಂದಿದೆ. ಆದಾಗ್ಯೂ, ಈ ಮಳೆಯೇ ಹಲವರ ಜೀವಹಾನಿಗೂ ಕಾರಣವಾಗಿರುವುದು ವಿಪರ್ಯಾಸ.  ಮಳೆ ಮತ್ತು ಸಿಡಿಲಿನ ಆರ್ಭಟದ ಕಾರಣ ಇದುವರೆಗೂ ರಾಜ್ಯದಲ್ಲಿ  75 ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ.  ಮಳೆಯ ಕಾರಣಕ್ಕೆ  ಮೈಸೂರಿನಲ್ಲಿ ಗರಿಷ್ಠ ಮಟ್ಟದಲ್ಲಿ ಜನ ಸಾವಿಗೀಡಾಗಿದ್ದಾರೆ. ಅಲ್ಲಿ ಒಟ್ಟು  12 ಮಂದಿ ಅಸು ನೀಗಿದ್ದಾರೆ. ಇನ್ನು , ಹಾವೇರಿ (7), ಧಾರವಾಡ ಮತ್ತು ಕಲಬುರಗಿ (6) ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ 7 ವರ್ಷಗಳಿಂದ ಸೀಡಿಲು, ಮಳೆಯ ಕಾರಣದಿಂದಾಗಿ ಪ್ರತಿವರ್ಷವೂ ಸರಾಸರಿ  100 ಕ್ಕಿಂತ ಹೆಚ್ಚು ಜನರು ಸಾಯುತ್ತಿದ್ದಾರೆ. ಕಳೆದ ಏಳು ವರ್ಷಗಳಲ್ಲಿ 711 ಜನರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ಮತ್ತು ಕೊಪ್ಪಳಲ್ಲಿ ಸಂಭವಿಸಿದ ಆರು ಮಂದಿಯ ಸಾವು ಗ್ರಾಮಸ್ಥರಲ್ಲಿ ಭೀತಿಯನ್ನುಂಟುಮಾಡಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿಯ ಪ್ರಕಾರ, ಪ್ರತಿ ವರ್ಷ ಸುಮಾರು 2000 ಜನರು ದೇಶದಲ್ಲಿ ಮಳೆ, ಸಿಡಿಲಿನ ಆಘಾತದಿಂದ ಸಾಯುತ್ತಾರೆ.
ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆಂದು ತಜ್ಞರು ಹೇಳುತ್ತಾರೆ. ಮಳೆ ಬಂದಾಗ ಜನರು ಮರಗಳ ಕೆಳಗೆ ಆಶ್ರಯವನ್ನು ಪಡೆಯುತ್ತಾರೆ. ಮರಗಳು ಉತ್ತಮ ವಿದ್ಯುತ್ ವಾಹಕಗಳಾಗಿರುವುದರಿಂದ, ಅವುಗಳಲ್ಲಿ ಆಶ್ರಯವನ್ನು ಪಡೆದುಕೊಳ್ಳುವ ಜನರು ಸುಲಭವಾಗಿ ಸಿಡಿಲಿನ ಆಘಾತ ಕ್ಕೆ ತುತ್ತಾಗುತ್ತಾರೆ. ನಗರಗಳಲ್ಲಿ ಸಹ,ಇದೇ ಕಾರಣದಿಂದ ಜನರು ಸಿಡಿಲಿನ ಹೊಡೆತಕ್ಕೆ ಸಿಕ್ಕುತ್ತಾರೆ.
"ಜನರು ಸುರಕ್ಷಿತ ಮನೆಗಳಲ್ಲಿ, ಛಾವಣಿಯ ಕೆಳಗೆ ಆಶ್ರಯ ಪಡೆಯಬೇಕು. ಮರಗಳ ಕೆಳಗಲ್ಲ.  ಅವರು ಕಾರಿನೊಳಗೆ ಇದ್ದರೂ ಬಾಗಿಲು ಗಳನ್ನು ಮುಚ್ಚಿಕೊಂಡಿರಬೇಕಾಗುತ್ತದೆ." ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರ (ಕೆಎಸ್ ಎನ್ ಡಿಎಂಸಿ) ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದರು.
ಮಿಂಚು, ಸಿಡಿಲಿನ ಕುರಿತು  ಎಚ್ಚರಿಸುವ ಅಪ್ಪ್ಲಿಕೇಷನ್
ಶೀಘ್ರದಲ್ಲೇ, ಸೆನ್ಸಾರ್ ಗಳ ಸಹಾಯದಿಂದ ಸಿಡಿಲು, ಮಿಂಚಿನ ಕುರಿತು ಎಚ್ಚರಿಸುವ  ಮೊಬೈಲ್ ಅಪ್ಲಿಕೇಶನ್ ಬರಲಿದೆ. ಈ ಯೋಜನೆಯು ಮುಂದಿನ ಮೂರು ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. "ಸೆನ್ಸಾರ್ ಗಳು 100 ಕಿಮೀ ಸುತ್ತಳತೆಯಲ್ಲಿ ಸಿಡಿಲು ಬಡಿಯುವ ಮುನ್ಸೂಚನೆ ನೀದಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ.  ಅವುಗಳು ಸಿಡಿಲು, ಗುಡುಗು ಪ್ರಾರಂಭಗೊಳ್ಳುವ ಕನಿಷ್ಠ 40 ನಿಮಿಷಗಳ ಮೊದಲುಅಪಾಯದ  ಎಚ್ಚರಿಕೆ ನೀಡಲಿವೆ" ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು. 
"ಅನೇಕ ರೈತರು ಮೊಬೈಲ್ ಅಪ್ಲಿಕೇಷನ್ ಕುರಿತು ಹೆಚ್ಚು ತಿಳಿದಿಲ್ಲವಾದ್ದರಿಂದ, ಹಾಯವಾಣಿಗಳು, ಪೊಲೀಸ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯದಲ್ಲಿ 22 ಲಕ್ಷ ಗ್ರಾಮಸ್ಥರಿಗೆ ಈ ಕುರಿತು ಸಂದೇಶ ರವಾನಿಸುತ್ತೇವೆ." ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.