ಹುಬ್ಬಳ್ಳಿ: ಹೆಲ್ಮೆಟ್ ಧರಿಸದ ಕ್ಯಾಬ್ ಚಾಲಕನಿಗೆ ಬಿತ್ತು ದಂಡ!
ಹೆಲ್ಮೆಟ್ ಧರಿಸದ ಕ್ಯಾಬ್ ಚಾಲಕನಿಗೆ ಪೊಲೀಸರು ದಂಡ ವಿಧಿಸಿರುವ ಅಪರೂಪದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ....

Published On :
ಹುಬ್ಬಳ್ಳಿ: ಹೆಲ್ಮೆಟ್ ಧರಿಸದ ಕ್ಯಾಬ್ ಚಾಲಕನಿಗೆ ಪೊಲೀಸರು ದಂಡ ವಿಧಿಸಿರುವ ಅಪರೂಪದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ರಾತ್ರಿ 10 ಗಂಟೆ ವೇಳೆಯಲ್ಲಿ ನವೀನ್ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದುಕೊಂಡು ಗೋಕುಲ್ ರಸ್ತೆಯ ಮೂಲಕ ಬರುತ್ತಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ನವೀನ್ ಕಾರನ್ನು ತಡೆ ಹಿಡಿದಿದ್ದಾರೆ. ಕಾರಿನಿಂದ ಇಳಿದ ನವೀನ್ ವಾಹನದ ಎಲ್ಲಾ ದಾಖಲಾತಿ ಹಾಗೂ ಚಾಲನ ಪರವಾನಗಿ ತೋರಿಸಿದ್ದಾರೆ. ಆದರೂ ಕೂಡ ಪೊಲೀಸರು ಆತನಿಗೆ 100 ರು. ದಂಡ ವಿಧಿಸಿದ್ದಾರೆ. ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಲಿಲ್ಲ ಎಂಬ ಕಾರಣಕ್ಕೆ.
ನವೀನ್ ಈ ಸಂಬಂಧ ಪೊಲೀಸರನ್ನು ಪ್ರಶ್ನಿಸಿದಾಗ ಆತನನ್ನು ನಿಂದಿಸಿದ್ದಾರೆ, ಅಕ್ಟೋಬರ್ 7ರಂದು ಚನ್ನಮ್ಮ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ.ಪೊಲೀಸರು ನನ್ನನ್ನು ನಿಂದಿಸಿದರು ಹಾಗೂ 100 ರು ದಂಡ ಪಾವತಿಸುವಂತೆ ಒತ್ತಾಯಿಸಿದರು, ನಾನು ಎಲ್ಲಾ ದಾಖಲೆಗಳನ್ನು ಹೊಂದಿದ್ದೇನೆ, ನಾನು ಆ್ಯಪ್ ಹೊಂದಿರುವ ಕ್ಯಾಬ್ ನ ವಾಹನ ಚಲಾಯಿಸುತ್ತಿದ್ದೇನೆ, ಎಲ್ಲಾ ದಾಖಲಾತಿಗಳು ಕೂಡ ಸರಿಯಿವೆ ಎಂದು ನವೀನ್ ಹೇಳಿದ್ದಾರೆ.
ಆದರೆ ಪೊಲೀಸರು ನನ್ನ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಇಲ್ಲ, ಆರಂಭದಲ್ಲಿ ಅವರು ನನಗೆ 500 ರು ಹಣ ಕೇಳಿದರು, ಆದರೆ ನಾನು ಹಣ ನೀಡಲು ನಿರಾಕರಿಸಿದಾಗ 100 ರು ದಂಡ ವಿಧಿಸಿದರು. ಕೆಎ25-D2271 ಕಾರಿನ ನಂಬರ್ ದಾಖಲಿಸಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿದ್ದಾರೆ ಎಂದು ನವೀನ್ ತಿಳಿಸಿದ್ದಾರೆ,
ಈ ಸಂಬಂಧ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ, ಎಂ,ಎನ್ ನಾಗರಾಜ ಅವರನ್ನು ಸಂಪರ್ಕಿಸಿದಾಗ ಈ ಸಂಬಂಧ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ, ಒಂದು ವೇಳೆ ಪೊಲೀಸ್ ಅಧಿಕಾರಿಗಳು ಲಂಚ ತೆಗೆದುಕೊಂಡಿರುವುದು ತಿಳಿದು ಬಂದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೂ ತಪ್ಪುಗಳಾಗಿರುತ್ತವೆ, ಕ್ಯಾಬ್ ಡ್ರೈವರ್ ಗಳು ಹಾಗೂ ದ್ವಿಚಕ್ರ ವಾಹನಗಳ ಸವಾರರು ಮಾಡಿದ ತಪ್ಪಿಗಾಗಿ ಸಿಸಿಟಿವಿ ಕ್ಯಾಮೆರಾ ಆಧರಿಸಿ ಅವರ ವಿರುದ್ಧ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


