ಇಂದಿನಿಂದ ಎರಡು ದಿನ ಲಾರಿ ಮುಷ್ಕರ
ಸರಕು ಮತ್ತು ಸೇವಾ ತೆರಿಗೆಯಲ್ಲಿನ(ಜಿಎಸ್ಟಿ) ಅವೈಜ್ಞಾನಿಕ ಅಂಶಗಳನ್ನು ವಿರೋಧಿಸುವುದಲ್ಲದೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ..........

Published On :
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯಲ್ಲಿನ(ಜಿಎಸ್ಟಿ) ಅವೈಜ್ಞಾನಿಕ ಅಂಶಗಳನ್ನು ವಿರೋಧಿಸುವುದಲ್ಲದೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಇಂದಿನಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಲಾರಿ ಮುಷ್ಕರ ನಡೆಯಲಿದೆ.
ಅಖಿಲ ಭಾರತ ಮೋಟಾರು ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ನೀಡಿರುವ ಈ ಮುಷ್ಕರಕ್ಕೆ ಕರೆ ನೀಡಿದ್ದು ದಕ್ಷಿಣವಲಯ ಮೋಟಾರು ಟ್ರಾನ್ಸ್ ಪೋರ್ಟರ್ಸ್ ಕ್ಷೇಮಾಭಿವೃದ್ಧಿ ಸಂಘ ಸಹ ಬೆಂಬಲ ಘೋಷಿಸಿದೆ.
ಇದರಿಂದ ಕರ್ನಾಟಕ ಸೇರಿ ಭಾರತದ ಆದ್ಯಂತ 2 ದಿನ ಲಾರಿ ಸಂಚಾರ ಸ್ಥಗಿತವಾಗಲಿದೆ. ದಿನಬಳಕೆ ವಸ್ತುಗಳ , ಸರಬರಾಜು ವ್ಯತ್ಯಯವಾಗಲಿದೆ. ಹಾಲು,ಪೆಟ್ರೋಲ್ ಹಾಗೂ ಡೀಸೆಲ್ ಲಾರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಡಿಸೇಲ್ ದರವನ್ನು ಜಿಎಸ್ ಟಿಯಿಂದ ಹೊರಗಿಟ್ಟಿರುವುದರಿಂದ ಡಿಸೇಲ್ ವಾಹನ ಬಳಸುವವರಿಗೆ ಕಷ್ಟವಾಗುತ್ತಿದೆ. ಇನ್ನು ಪೆಟ್ರೋಲ್ ಮತ್ತು ಡಿಸೆಲ್ ದರಗಳನ್ನು ನಿತ್ಯವೂ ಪರಿಷ್ಕರಣೆ ಮಾಡುವುದರಿಂದ ಡಿಸೇಲ್ ಬೆಲೆಯಲ್ಲಿ ದಿನ ದಿನವೂ ಏರಿಕೆ ಆಗುತ್ತಿದೆ. ಇದು ಲಾರಿ ಮಾಲಿಕರು ಸೇರಿ ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ಟ್ರಕ್ಕರ್ಸ್ ಅಸೋಸಿಯೇಷನ್ ತಿಳಿಸಿದೆ.
ಮುಷ್ಕರ ನಿರತರ ಪ್ರಮುಖ ಬೇಡಿಕೆಗಳು ಹೀಗಿವೆ-
- ಹೆಚ್ಚುವರಿ ತೆರಿಗೆ ಸಂಗ್ರಹ ನಿಲ್ಲಿಸಬೇಕು.
- ದೇಶವ್ಯಾಪಿ ಏಕ ರೂಪದ ಡೀಸೆಲ್ ದರ ಜಾರಿಗೆ ಬರಬೇಕು.
- 347 ಹೆದ್ದಾರಿ ಟೋಲ್ ರದ್ದುಪಡಿಸಿ ವಾರ್ಷಿಕ ಒಂದು ಬಾರಿ ಟೋಲ್ ನಿಯಮ ಜಾರಿ ಮಾಡಬೇಕು.
- ಹೆದ್ದಾರಿಗಳಲ್ಲಿ ಸಾರಿಗೆ ಅಧಿಕಾರಿಗಳು ನೀಡುವ ಕಿರುಕುಳ ನಿಲ್ಲಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Lorry strikeಲಾರಿ ಮುಷ್ಕರrise of petrol and diesel pricesAll India Motor Transport CongressTwo-day lorry strikeಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಅಖಿಲ ಭಾರತ ಮೋಟಾರು ಸಾರಿಗೆ ಕಾಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


