ಶಶಿಕಲಾ ಪೆರೋಲ್ ಪ್ರಕ್ರಿಯೆ: ಕಾದು ಕಾದು ಸುಸ್ತಾದ ಜೈಲಿನ ಬೇರೆ ಕೈದಿಗಳ ಸಂಬಂಧಿಕರು!
ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ ಅವರಿಗೆ 5 ದಿನಗಳ ಪೆರೋಲ್ ಸಿಕ್ಕಿದ ಹಿನ್ನೆಲೆಯಲ್ಲಿ, ಅವರನ್ನು ಭೇಟಿ ಮಾಡಲು ಶಶಿಕಲಾ ಸಂಬಂಧಿಕರು ಮತ್ತು ...

Published On :
ಬೆಂಗಳೂರು: ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ ಅವರಿಗೆ 5 ದಿನಗಳ ಪೆರೋಲ್ ಸಿಕ್ಕಿದ ಹಿನ್ನೆಲೆಯಲ್ಲಿ, ಅವರನ್ನು ಭೇಟಿ ಮಾಡಲು ಶಶಿಕಲಾ ಸಂಬಂಧಿಕರು ಮತ್ತು ಆಪ್ತರು ಜೈಲಿನ ಹೊರಗಡೆ ಸುಮಾರು ಗಂಟೆಗಳ ಕಾಲ ಕಾದರು.
ಜೈಲು ಅಧಿಕಾರಿಗಳು ಪೆರೋಲ್ ಅರ್ಜಿ ಪ್ರಕ್ರಿಯೆ ಪರಿಶೀಲನೆಯಲ್ಲಿ ನಿರತರಾಗಿದ್ದರು. ತಮಿಳುನಾಡಿನಿಂದ ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದ ಸಂಬಂಧಿಕರು ಹಾಗೂ ಆಪ್ತರು, ಮಧ್ಯಾಹ್ನ 3 ಗಂಟೆ ವರೆಗೆ ಕಾದು ಕಾದು ಸುಸ್ತಾದರು, ಆಂತಿಮವಾಗಿ ಶಶಿಕಲಾ 3 ಗಂಟೆ ನಂತರ ಜೈಲಿನಿಂದ ಹೊರ ಬಂದರು.
ಮಾಗಡಿ, ಬಿಟಿಎಂ ಲೇಔಟ್ ಸೇರಿದಂತೆ ಹಲವು ಸ್ಥಳಗಳಿಂದ ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡು ಆಗಮಿಸಿದ್ದ ಸಂಬಂಧಿಕರು ಕೂಡ 3 ಗಂಟೆವರೆಗೆ ಕಾದರು.
ಮಾಗಡಿಯಿಂದ ಬಂದಿದ್ದ ಫಾತಿಮಾ, ನಾನು ಯಾವಾಗ ಬಂದರೂ ನನ್ನ ಪತಿಯನ್ನು ಮಧ್ಯಾಹ್ನ 12 ಗಂಟೆಯೊಳಗೆ ಭೇಟಿ ಮಾಡುತ್ತಿದ್ದೆ, ಆದರೆ ಇಂದು ಶಶಿಕಲಾ ಪೆರೋಲ್ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಮದ್ಯಾಹ್ನ 3 ಗಂಟೆವರೆಗೆ ಕಾಯಲು ಹೇಳಿದರು. ಹಲವು ಮಂದಿ ಜೈಲಿನ ಹೊರಗೆ ಕಾಯುತ್ತಿದ್ದು, ಊಟ ಕೂಡ ಮಾಡಲಿಲ್ಲ ಎಂದು ತಿಳಿಸಿದರು,
ಪೆರೋಲ್ ಮೇಲೆ ಹೊರಬಂದಿರುವ ಶಶಿಕಲಾ ರಸ್ತೆ ಮುಖಾಂತರ ಚೆನ್ನೈ ತಲುಪಿದರು. ಟಿ ನಗರದಲ್ಲಿರುವ ತನ್ನ ನಾದಿನಿ ಇಳವರಸಿ ಪುತ್ರಿ ವಿಷ್ಣು ಪ್ರಿಯಾ ಮನೆಗೆ ಆಗಮಿಸಿದ ಶಶಿಕಲಾ ಮುಂದಿನ 5 ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ, ತಮ್ಮ ಪತಿ ನಟರಾಜನ್ ದಾಖಲಾಗಿರುವ ಆಸ್ಪತ್ರೆಗೆ ಅಲ್ಲಿಂದಲೇ ತೆರಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


