ರವಾಂದಾದಲ್ಲಿ ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದ 11 ಜನರ ಬಂಧನ
ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಗ್ರಾಮ ಹಕ್ಕಿ ಪಿಕ್ಕಿ ಬುಡಕಟ್ಟಿನ ಹನ್ನೊಂದು ಜನರನ್ನು ರವಾಂದಾದಲ್ಲಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ..

Published On :
ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಗ್ರಾಮ ಹಕ್ಕಿ ಪಿಕ್ಕಿ ಬುಡಕಟ್ಟಿನ ಹನ್ನೊಂದು ಜನರನ್ನು ರವಾಂದಾದಲ್ಲಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ಅ.4 ರಂದು ಇವರನ್ನು ಬಂಧಿಸಿದ್ದರೂ ಸಹ ಬಂಧಿತರ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ ಬಳಿಕ ಘಟನೆ ಕುರಿತ ಮಾಹಿತಿ ಹೊರಬಿದ್ದಿದೆ.
ಕುಟುಂಬ ಸದಸ್ಯರು ಕೇಂದ್ರ ಕಮಿಷನರ್ ಮತ್ತು ಪೋಲಿಸ್ ಮೇಲ್ವಿಚಾರಕರ ಮುಖಾಂತರ ವಿದೇಶಾಂಗ ಸಚಿವಾಲಯಕ್ಕೆ ಮನವಿಯನ್ನು ಸಲ್ಲಿಸಿದರು.
"ನಾವು ಬಂಧಿತರಾದ ನಮ್ಮವರೊಡನೆ ಸಂಪರ್ಕ ಕಳೆದುಕೊಂಡಿದ್ದೇವೆ. ಪೊಲೀಸರು ಅವರ ಸೆಲ್ ಪೋನ್ ಗಳನ್ನು ವಶಕ್ಕೆ ಪಡೆದಿರಬಹುದು" ಎಂದು ಬಂಧಿತ ರಲ್ಲಿ ಒಬ್ಬರಾದ ರಾಜಾ ಬಾಬು ಅವರ ತಂದೆ ನಾಸಿಕ್ ಬಾಬು ಹೇಳಿದ್ದಾರೆ. ಬಂಧಿತರಾದ ಬುಡಕಟ್ಟು ಜನರ ಪೈಕಿ ಓರ್ವನಾದ ರಂಜ್ಯಾನ್, ತಮ್ಮ ಫೋಟೋವನ್ನು ವಾಟ್ಸ್ ಅಪ್ ನಲ್ಲಿ ನಲ್ಲಿ ಬುಡಕಟ್ಟು ನಾಯಕ ಸಿದ್ದಪ್ಪ ಎನ್ನುವವರಿಗೆ ಕಳಿಸಿದ್ದನು.
"ನಮ್ಮ ಜನರು 10-15 ವರ್ಷಗಳಿಂದಲೂ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ನಾವು ಅನಕ್ಷರಸ್ಥರಾದರೂ, ಅಗತ್ಯ ದಾಖಲೆಗಳನ್ನು ಹೊಂದಿದ್ದೇವೆ. ನಮಗೆ ಇಲ್ಲಿ ಯಾವುದೇ ಉದ್ಯೋಗವಿಲ್ಲದ ಕಾರಣ ನಮಗೆ ತಿಳಿದ ಕೆಲ ಔಷಧಿಗಳನ್ನು ವಿತರಿಸುವ ಮೂಲಕ ಹಣ ಗಳಿಸಲು ವಿದೇಶಕ್ಕೆ ತೆರಳುತ್ತೇವೆ. ಹೀಗೆ ವಿದೇಶಕ್ಕೆ ತೆರಳುವಾಗಲೂ ಅವರೆಲ್ಲಾ ತಮ್ಮ ಪತ್ನಿಯರೊಡನೆ ತೆರಳುತ್ತಾರೆ" ನಾಸಿಕ್ ಬಾಬು ಹೇಳಿದರು.
ಬಂಧಿತರಾದ ಎಲ್ಲ 11 ಜನರಲ್ಲಿಯೂ ಪಾಸ್ ಪೋರ್ಟ್, ವೀಸಾ ಮತ್ತು ಇತರ ಅಗತ್ಯ ದಾಖಲೆಗಳಿವೆ ಎಂದು ಸಿದ್ದಪ್ಪ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದವರು 'ವಲಸೆ ಜನಾಂಗದವರಾಗಿದ್ದು ' ಅವರು ಸರ್ಡಾಶಿವಪುರ ಹಳ್ಳಿಯಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಸರ್ಕಾರ ಅವರಿಗೆ ಪುನರ್ವಸತಿ ಕಲ್ಪಿಸಿ ಕೊಟ್ಟಿದೆ. ಈಗ ಗ್ರಾಮವು ಕನಿಷ್ಠ 1,500 ಕುಟುಂಬಗಳನ್ನು ಹೊಂದಿದೆ. ಹಕ್ಕಿ ಪಿಕ್ಕಿ ಬುಡಕಟ್ಟು ಜನರು ದಶಕಗಳಿಂದಲೂ ಆಫ್ರಿಕನ್ ದೇಶಗಳಿಗೆ ವ್ಯಾಪಾರಕ್ಕಾಗಿ ಭೇಟಿ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿದೇಶಾಂಗ ಸಚಿವಾಲಯಶಿವಮೊಗ್ಗShivamoggaMinistry of External AffairsRwandaHakki Pikki tribeಹಕ್ಕಿ ಪಿಕ್ಕಿ ಬುಡಕಟ್ಟುರವಾಂದಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


