ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ
ಆ್ಯಕ್ಸೆಸ್ ಇಂಡಿಯಾ ನೀಡುವ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಆಯ್ಕೆ ಆಗಿದ್ದಾರೆ.

Published On :
ಧರ್ಮಸ್ಥಳ: ಆ್ಯಕ್ಸೆಸ್ ಇಂಡಿಯಾ ನೀಡುವ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಆಯ್ಕೆ ಆಗಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೂಲಕ ಆರ್ಥಿಕ ಸಬಲೀಕರಣಕ್ಕೆ ಹೆಗ್ಗಡೆ ಅವರು ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ಡಾರೆ. "ದೇಶದ ಮೈಕ್ರೋಫೈನಾನ್ಸ್ ವಲಯದ ಅಭಿವೃದ್ಧಿಗೆ ನೀಡಿದ ಕಾಣಿಕೆ, ಸಂಸ್ಥೆಗಳನ್ನು ಬೆಳೆಸಿದ ರೀತಿ, ಶದ ಹಣಕಾಸು ವಲಯದ ಸಮಗ್ರ ಮುನ್ನಡೆಗೆ ನಿಮ್ಮ ಕೊಡುಗೆಯನ್ನು ಪರಿಗಣಿಸಿ ನಿಮ್ಮನ್ನು ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ" ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರಾಧಿಕಾ ಆಗಸ್ತೆ ತಿಳಿಸಿದ್ದಾರೆ.
ಈ ಬಾರಿ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ವೀರೇಂದ್ರ ಹೆಗ್ಗಡೆಯವರಿಗೆ ನೀಡಲಾಗಿದೆ. ಡಿ.11ಮತ್ತು 12ರಂದು ದಿಲ್ಲಿಯ ಅಶೋಕಾ ಹೋಟೆಲ್‌ನಲ್ಲಿ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾದ ಸಮಾವೇಶ ನಡೆಯುತ್ತಿದೆ. ಇದರ ಮೊದಲ ದಿನ ಪ್ರಶಸ್ತಿ ಪ್ರಧಾನ ನೆರವೇರಿಸಲಾಗುತ್ತದೆ.
ಸೂಕ್ಷ್ಮ ಹಣಕಾಸು ವಲಯದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮತ್ತು ಆ ವಲಯದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸಿ ಕಳೆದ 9 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಹಿಂದೆ ಇದನ್ನೇ ಮೈಕ್ರೋ ಫೈನಾನ್ಸ್ ಪ್ರಶಸ್ತಿ ಎಂದು ಕರೆಯಲಾಗುತ್ತಿದ್ದು ಎಚ್‌ಎಸ್‌ಬಿಸಿ ಸಂಸ್ಥೆ ಈ ಪ್ರಶಸ್ತಿ ವಿತರಣೆಗೆ ಸಹಕಾರ ನೀಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Dr. Veerendra heggadeಡಾ. ವೀರೇಂದ್ರ ಹೆಗ್ಗಡೆಶ್ರೀInclusive India AwardShri Kshetra Dharmasthala Rural Development ProjectAccess Indiaಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


