ಬೀದರ್: ವೈದ್ಯರಿಗೆ ಬ್ಲ್ಯಾಕ್ ಮೇಲ್, ಐವರ ಬಂಧನ
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಅಧಿಕಾರಿಗಳ ಸೋಗಿನಲ್ಲಿ ವೈದ್ಯರಿಗೆ ಬೆದರಿಕೆ ಹಾಕಿ ಹಣ ಕೀಳುತ್ತಿದ್ದ ಐವರನ್ನು ಬೀದರ್ ಪೋಲೀಸರು ವಶಕ್ಕೆ ಪಡೆದಿದ್ದಾರೆ.

Published On :
ಬೀದರ್: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಅಧಿಕಾರಿಗಳ ಸೋಗಿನಲ್ಲಿ ವೈದ್ಯರಿಗೆ ಬೆದರಿಕೆ ಹಾಕಿ ಹಣ ಕೀಳುತ್ತಿದ್ದ ಐವರನ್ನು ಬೀದರ್ ಪೋಲೀಸರು ವಶಕ್ಕೆ ಪಡೆದಿದ್ದಾರೆ.
"ನಾವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧಿಕಾರಿಗಳೆಂದು" ಹೇಳಿಕೊಂಡಿದ್ದ ಐದು ಮಂದಿ ಬೆಂಗಳೂರಿನಿಂದ ಬೀದರ್ ಗೆ ಬಂದಿದ್ದರು. ಅವರು ಅಲ್ಲಿನ ಖಾಸಗಿ ಆಸ್ಪತ್ರೆ ಹಾಗೂ ನವ ಜೀವನ ಆಸ್ಪತ್ರೆ ವೈದ್ಯರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ನೀವು ನಮಗೆ ಹಣ ಕೊಡದೇ ಹೋದಲ್ಲಿ ನಿಮ್ಮ ವಿರುದ್ಧ ಎಮ್‍ಸಿಐ ಗೆ ವರದಿ ಸಲ್ಲಿಸುವುದಾಗಿ ಬೆದರಿಸುತ್ತಿದ್ದರು.
ಬಂಧಿತರನ್ನು ಸುನೀಲ್ (31), ಜೀನಿತ್ (25), ಪುನೀತ್ (25), ವೆಂಕಟೇಶ್ವರ ಪ್ರಿಯದರ್ಶಿನಿ (40), ಮಂಜುಳಾ (26) ಎಂದು ಗುರುತಿಸಲಾಗಿದ್ದು ಕೆಲವು ದಿನಗಳಿಂದ ಬೀದರ್ ನಲ್ಲಿಯೇ ನೆಲೆಸಿದ್ದ ಖದೀಮ ತಂಡ ವೈದ್ಯರ ಬಗೆಗೆ ಮಾಹಿತಿ ಕಲೆಹಾಕಿದೆ. ಆ ನಂತರ ಈ ಕೃತ್ಯ ಎಸಗಿದೆ. ಇದೀಗ ತಂಡವು ಬೀದರ್ ಪೋಲೀಸರ ವಶದಲ್ಲಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೀದರ್BidarBidar policeMedical Council of India (MCI)blackmail to doctorsಬೀದರ್ ಪೋಲೀಸರುಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ವೈದ್ಯರಿಗೆ ಬೆದರಿಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


